ಬದುಕಿಗೊಂದು ಗುರಿಯೆ ಇಲ್ಲವೇ

– ಶಾಂತ್ ಸಂಪಿಗೆ.

ಇದುವೆ ನಮ್ಮ ಬಾಳು
ದಿನ ಒಂದೇ ಗೋಳು
ಬದುಕಿಗೊಂದು ಗುರಿಯೆ ಇಲ್ಲವೇ

ಹಣದ ಹಿಂದೆ ಓಡು
ತ್ರುಪ್ತಿ ಸಿಗದು ನೋಡು
ಆಸೆಗೆಂದೂ ಕೊನೆಯೆ ಇಲ್ಲವೇ

ಮಾತಲ್ಲಿ ಬರಿ ಮೋಸ
ಬಿತ್ತಿ ಬೆಳೆವ ದ್ವೇಶ
ನೆಮ್ಮದಿ ನಿನಗೆ ಇಲ್ಲವೇ

ನಾಲ್ಕು ದಿನದ ಬಾಳು
ಪ್ರೀತಿಗೆ ಸ್ವಲ್ಪ ಸೋಲು
ಪ್ರೀತಿ ಸ್ನೇಹ ಅಮರ ಅಲ್ಲವೇ

ನಿಸ್ವಾರ‍್ತ ಸೇವೆ ಮಾಡು
ನಗುತ ಬದುಕಿ ನೋಡು
ಸ್ವರ‍್ಗ ಸುಕವ ಇಲ್ಲೇ ಕಾಣುವೆ

(ಚಿತ್ರ ಸೆಲೆ: theunboundedspirit.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: