ತುಪ್ಪದ ಅವಲಕ್ಕಿ
– ಸವಿತಾ.
ಏನೇನು ಬೇಕು?
- ತೆಳು ಅವಲಕ್ಕಿ – 3 ಬಟ್ಟಲು
- ಈರುಳ್ಳಿ – 1
- ಹಸಿ ಮೆಣಸಿನಕಾಯಿ – 3
- ತುಪ್ಪ – 3 ಚಮಚ
- ಸಾಸಿವೆ – 1/2 ಚಮಚ
- ಜೀರಿಗೆ – 1/2 ಚಮಚ
- ಹಸಿ ಕೊಬ್ಬರಿ ತುರಿ – 1/2 ಬಟ್ಟಲು
- 1/2 ಹೋಳು ನಿಂಬೆ ರಸ
- ಸಕ್ಕರೆ – ರುಚಿಗೆ ತಕ್ಕಶ್ಟು
- ಉಪ್ಪು – ರುಚಿಗೆ ತಕ್ಕಶ್ಟು
- ಕೊತ್ತಂಬರಿ ಸೊಪ್ಪು
- ಕರಿಬೇವು
- ಇಂಗು – ಸ್ವಲ್ಪ
ಮಾಡುವ ಬಗೆ
- ಬಾಣಲೆಯಲ್ಲಿ ತುಪ್ಪ ಹಾಕಿ ಬಿಸಿ ಮಾಡಿ.
- ಸಾಸಿವೆ, ಜೀರಿಗೆ, ಕರಿಬೇವು, ಇಂಗು, ಕತ್ತರಿಸಿದ ಹಸಿ ಮೆಣಸಿನಕಾಯಿ ಹಾಕಿ ಒಗ್ಗರಣೆ ಕೊಡಿ.
- ನಂತರ ಅವಲಕ್ಕಿ ಸೇರಿಸಿ ಕಲಸಿಕೊಳ್ಳಿ.
- ಕತ್ತರಿಸಿದ ಈರುಳ್ಳಿ, ಉಪ್ಪು, ಸಕ್ಕರೆ, ನಿಂಬೆ ರಸ, ಹಸಿ ಕೊಬ್ಬರಿ ತುರಿ, ಕೊತ್ತಂಬರಿ ಸೊಪ್ಪು ಹಾಕಿ ಕಲಸಿರಿ.
- ಈಗ ತುಪ್ಪದ ಅವಲಕ್ಕಿ ಸವಿಯಲು ಸಿದ್ದ.
ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು ಉದುರಿಸಿ. ನಿಮಗೆ ಬೇಕಾದಲ್ಲಿ ಸಣ್ಣನೆಯ ಸೇವು ಕೂಡ ಹಾಕಿಕೊಳ್ಳಬಹುದು. ಮೊಸರು ಹಾಕಿಕೊಂಡೂ ತಿನ್ನಬಹುದು.
ಇತ್ತೀಚಿನ ಅನಿಸಿಕೆಗಳು