ದಿಡೀರ್ ಮಂಡಕ್ಕಿ ಸೂಸ್ಲ

– ನಿತಿನ್ ಗೌಡ.

ಬೇಕಾಗುವ ಸಾಮಾನುಗಳು

  • ಕೈ ಮಂಡಕ್ಕಿ – 5 ರಿಂದ 6 ಪಾವು
  • ಹಸಿಮೆಣಸು – 4
  • ಅರಿಶಿಣ ಪುಡಿ – ಅರ್‍ದ ಚಮಚ
  • ಕೊತ್ತಂಬರಿ ಸೊಪ್ಪ್ಪು – ಸ್ವಲ್ಪ
  • ಹುರಿಗಡಲೆ ಪುಡಿ – 3 ಚಮಚ
  • ಬೇವಿನ ಎಲೆ – 1 ಎಸಳು
  • ಈರುಳ್ಳಿ – 2
  • ಸಾಸಿವೆ – ಸ್ವಲ್ಪ
  • ಉಪ್ಪು – ಸ್ವಲ್ಪ
  • ಎಣ್ಣೆ – ಒಗ್ಗರಣೆಗೆ
  • ಉದ್ದಿನ ಬೇಳೆ – 1 ಚಮಚ
  • ನಿಂಬೆಹಣ್ಣು – 1

ಮಾಡುವ ಬಗೆ:

ಮೊದಲಿಗೆ ಕೈ ಮಂಡಕ್ಕಿಯನ್ನು ತೊಳೆದುಕೊಂಡು, ಅದರಲ್ಲಿ ಹೆಚ್ಚಿರುವ ನೀರನ್ನು ಹಿಂಡಿ ತೆಗೆದು, ಒಂದು ಪಾತ್ರೆಗೆ ಹಾಕಿ, ಐದು ನಿಮಿಶ ಆರಲು ಬಿಡಿ. ಆಮೇಲೆ ಇದಕ್ಕೆ ಹುರಿಗಡಲೆ ಪುಡಿ, ಅರಿಶಿಣ, ಕೊತ್ತಂಬರಿ, ಉಪ್ಪು ಹಾಕಿ ಕಲಸಿಟ್ಟುಕೊಳ್ಳಿರಿ. ಈಗ ಬಾಣಲೆಗೆ ಎಣ್ಣೆ ಹಾಕಿ ಅದು ಕಾದ ನಂತರ, ಅದಕ್ಕೆ ಸಾಸಿವೆ, ಉದ್ದಿನ ಬೇಳೆ ಹಾಕಿ ಅದು ಚೂರು ಬೆಂದಮೇಲೆ ಹೆಚ್ಚಿಟ್ಟುಕೊಂಡ ಈರುಳ್ಳಿ, ಮೆಣಸಿನ ಕಾಯಿ ಹಾಕಿ ಬಾಡಿಸಿ. ಈಗ ಇದಕ್ಕೆ ಕಲಸಿಟ್ಟುಕೊಂಡ ಮಂಡಕ್ಕಿ ಹಾಕಿಕೊಂಡು ನಡು ಉರಿಯಲ್ಲಿ ಬೇಯಿಸಿ, ಒಲೆ ನಂದಿಸಿ. ಈಗ ಇದಕ್ಕೆ ಚೂರು ನಿಂಬೆ ಹುಳಿ ಹಿಂಡಿ ಕಲಸಿಕೊಳ್ಳಿರಿ. ಈಗ ರುಚಿ ರುಚಿಯಾದ ಮಂಡಕ್ಕಿ ಸೂಸ್ಲ ತಯಾರಿದ್ದು ಬೆಳಿಗ್ಗೆ ತಿಂಡಿಯಾಗಿ ಇಲ್ಲವೇ ಸಂಜೆ ಕಾಪಿ, ಟೀ ಒಟ್ಟಿಗೆ ತಿನ್ನಬಹುದು.

( ಚಿತ್ರಸೆಲೆ: youtube.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks