
Person Outdoor Ocean Thinking Sunset Man Sea
ಮಂದಹಾಸವ ನೀನು ನೋಡಬಾರದೆ ಇಂದು?
– ಈಶ್ವರ ಹಡಪದ.
ನಿನ್ನ ಸಹವಾಸದಿಂದ
ಕನಸುಗಳ ರಾಶಿ ಈಗ
ವಿಸ್ತಾರವಾಗುತ್ತಿದೆ ನೋಡು
ತಂಗಾಳಿಯು ಕೂಡ
ನಿನ್ನ ನೆನಪಿಸುತ್ತಿರಲು,
ನಿನ್ನ ಉಸಿರಿಗೆ ತಾಕಿ
ನನ್ನ ಮನಸ್ಸು ಕರಗಲು ಬಯಸುತ್ತಿದೆ ಇಂದು
ನನ್ನ ನೆನಪಿನ ಸಂತೆಗೆ
ನಿನ್ನದೇ ಹೆಸರಿರುವಾಗ
ಹ್ರುದಯವು ನಿನ್ನ ಮರೆತಂತೆ
ನಟಿಸಲು ಸಾದ್ಯವೇ ಇಂದು?
ನನ್ನ ಹ್ರುದಯದ ಜಗದ
ಪ್ರಶಾಂತವಾದ ಆಕಾಶದಲ್ಲಿ
ಮೋಡಗಳ ಮರೆಯಲ್ಲಿ
ಬಾನಾಡಿಗಳ ಹಿಂಡು
ನಿನ್ನ ಹೆಸರು ಅರಚುವಾಗ
ಮುಕದಲ್ಲಿ ಮೂಡಿದ
ಮಂದಹಾಸವ ನೀನು ನೋಡಬಾರದೆ ಇಂದು?
ಮನಸ್ಸಿನ ದರ‍್ಪಣ
ನಿನ್ನದೇ ಬಿಂಬ ನೋಡಲು ಬಯಸಿರುವಾಗ
ನೀನೊಮ್ಮೆ ಬಂದು
ನನ್ನ ಮನವ ಬೆಳಗಬಾರದೆ?
(ಚಿತ್ರ ಸೆಲೆ: freegreatpicture.com)