ರುಚಿ ರುಚಿಯಾದ ಕರ‍್ಚಿಕಾಯಿ

–  ಸವಿತಾ.

ಕರ‍್ಚಿಕಾಯಿ, Karchikayi

ಏನೇನು ಬೇಕು?

  • 1/2 ಕೆಜಿ – ಮೈದಾ
  • 250 ಗ್ರಾಂ – ಒಣಕೊಬ್ಬರಿ
  • 125 ಗ್ರಾಂ – ಕರಿ ಬಿಳಿ ಎಳ್ಳು
  • 50 ಗ್ರಾಂ – ಪುಟಾಣಿ
  • 200 ಗ್ರಾಂ – ಬೆಲ್ಲ
  • 4 ಏಲಕ್ಕಿ
  • 4 ಚಮಚ – ಚಿರೋಟಿ ರವೆ
  • 1 ಚಮಚ – ಗಸಗಸೆ
  • ಕರ‍್ಚಿಕಾಯಿ ಕರಿಯಲು ಎಣ್ಣೆ

ಮಾಡುವ ಬಗೆ

  • ಮೈದಾ ಹಿಟ್ಟು, ಚಿರೋಟಿ ರವೆ, ಕಾಯಿಸಿದ ಎಣ್ಣೆ ಹಾಕಿ, ಸ್ವಲ್ಪ ನೀರು ಸೇರಿಸಿ ಹಿಟ್ಟನ್ನು ಪೂರಿ ಹಿಟ್ಟಿನ ಹದಕ್ಕೆ ಕಲಸಿ ಒಂದು ಅತವಾ ಎರಡು ಗಂಟೆ ನೆನೆಯಲು ಬಿಡಿ
  • ಒಣಕೊಬ್ಬರಿಯನ್ನು ತುರಿದಿಟ್ಟುಕೊಳ್ಳಿ
  • ಎಳ್ಳು, ಪುಟಾಣಿ ಸ್ವಲ್ಪ ಹುರಿದು ಮಿಕ್ಸರ್ ನಲ್ಲಿ ಪುಡಿ ಮಾಡಿ ಇಟ್ಟುಕೊಳ್ಳಿ. ಇದಕ್ಕೆ ಏಲಕ್ಕಿ ಪುಡಿ ಸೇರಿಸಿ
  • ಒಣಕೊಬ್ಬರಿ ತುರಿ ಮತ್ತು ಗಸಗಸೆ, ಬೆಲ್ಲದ ಪುಡಿ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಕಲಸಿ ಕರ‍್ಚಿಕಾಯಿಗೆ ತುಂಬಲು ತಯಾರು ಮಾಡಿ ಇಟ್ಟುಕೊಂಡಿರಿ
  • ನೆನೆಸಿಟ್ಟಿದ ಹಿಟ್ಟನ್ನು ಸ್ವಲ್ಪ ತೆಗೆದುಕೊಂಡು ಸ್ವಲ್ಪ ಉದ್ದ ಎಲೆ ಲಟ್ಟಿಸಿ, ನಡುವೆ ಕೊಬ್ಬರಿ ಮಿಶ್ರಣ ಹಾಕಿರಿ
  • ಲಟ್ಟಿಸಿದ ಎಲೆಯ ಅಂಚಿನ ಸುತ್ತ ಸ್ವಲ್ಪ ನೀರಿನಿಂದ ತೀಡಿ, ಎಲೆಯನ್ನು ಮಡಚಿ
  • ಕರಿದಾಗ ಕೊಬ್ಬರಿ ಮಿಶ್ರಣದ ಪುಡಿ ಹೊರ ಬರದಂತೆ ಒತ್ತಿಕೊಂಡು, ಕಾದ ಎಣ್ಣೆಯಲ್ಲಿ ಒಂದೊಂದೇ ಕರ‍್ಚಿಕಾಯಿಯನ್ನು ಸ್ವಲ್ಪ ಹೊಂಬಣ್ಣ ಬರುವವರೆಗೂ ಕರಿಯಿರಿ

ಕರ‍್ಚಿಕಾಯಿಯನ್ನು ಎರಡು ವಾರ ಇಟ್ಟೂ  ತಿನ್ನಬಹುದು.

 

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *