ಮಕ್ಕಳ ಕವಿತೆ: ಸೂಟಿ ಮ್ಯಾಲ ಸೂಟಿ

– ಚಂದ್ರಗೌಡ ಕುಲಕರ‍್ಣಿ.

ಸೂಟಿ ಮ್ಯಾಲ ಸೂಟಿ ನೋಡು
ಆಗಸದಲ್ಲಿಯ ಚುಕ್ಕೆಗೆ
ಮಾಸ್ತರ ಚಂದ್ರ ಬರೋದೆ ಇಲ್ಲ
ಹದಿನೈದು ದಿನ ಶಾಲೆಗೆ

ಆಡುತ ನಲಿಯುತ ಕಲಿವವು ಚುಕ್ಕೆ
ಬರದೆ ಇದ್ರು ಮಾಸ್ತರ
ಸ್ವಂತ ಬೆಳಕಲಿ ಹೊಳೆಯುವವಲ್ಲ
ಅನಂತ ಲೋಕ ನಿರಂತರ

ಬಟ್ಟ ಬಯಲಿನ ಮುಗುಲಿನಲ್ಲಿ
ಮಿನುಗುವಂತ ಚುಕ್ಕಿ
ಕೋಣೆಯಲ್ಲಿ ಕೊಳೆಯುವಂತ
ಮಕ್ಕಳಿಗಿಂತ ಲಕ್ಕಿ

ತಿಂಗಳಿಗೆ ಹದಿನೈದು ದಿನ ಸೂಟಿ
ನಮಗೂ ಕೊಟ್ಟಿದ್ದರಂದ್ರೆ
ಸರಕಾರ ಶಿಕ್ಶಣ ಇಲಾಕೆಗಳಿಗೆ
ಆಗತಿತ್ತೇನು ತೊಂದ್ರೆ

(ಚಿತ್ರ ಸೆಲೆ: pixabay.com)

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: