ನೀ ದೂರದಿ ಕಾಣುವ ಮರೀಚಿಕೆ

– ವಿನು ರವಿ.

ನೀ ಕಂಡ ಮೊದಲ ದಿನ
ಮದುರಬಾವ ಮಿಂಚಿತು ಆ ಕ್ಶಣ
ಒಲುಮೆಯೊ ನಲುಮೆಯೊ
ಅರಿಯದಾಯಿತು ಮನ

ಮೌನದಲೆ ಮಾತರಳಿತು
ನೂರು ಕನಸುಗಳ ಬಾವಸೇತು
ಕಂಡದ್ದು ಕಾಣದ್ದೆಲ್ಲ ಕವಿತೆಯಾಯಿತು
ಮನಸೆಲ್ಲ ಗೆಲುವಿಂದ ಓಲಾಡಿತು

ನೀ ದೂರದಿ ಕಾಣುವ ಮರೀಚಿಕೆ
ನಾ ಬಯಸಿದ ಮಾಯಾಜಿಂಕೆ
ಬಾನಲಿ ಮಿನುಗುವ ಓ ತಾರೆ
ನಿನ್ನಾ ನಲುಮೆಯ ಮರೆಯಲಾರೆ

(ಚಿತ್ರ ಸೆಲೆ: pixabay.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.