ಕಮಲ ಪ್ರಿಯಳೆ ನಾರಾಯಣಿ

– ಸುರಬಿ ಲತಾ.

god, goddess, lakshmi, prayer, ಲಕ್ಶ್ಮೀ ಪ್ರಾರ‍್ತನೆ

ಮಂದಸ್ಮಿತ ಮನೋರಮಣಿ
ಹರಿಯ ಗೆದ್ದ ಹ್ರುದಯರಾಣಿ
ಕಮಲ ಪ್ರಿಯಳೆ ನಾರಾಯಣಿ
ಪೂಜಿಸಲು ನಾನಾದೆ ಅಣಿ

ಏನು ಆನಂದವೋ ನಿನ್ನೆಡೆಯಲ್ಲಿ
ಪೂಜಿಸದವರಾರು ಜಗದಲ್ಲಿ
ಒಲಿದೆ ನೀನು ನಮ್ಮ ಬಾಳಿಗೆ
ಹಣ್ಣು, ಕಾಯಿ ತಂದೆ ಪಾದಕೆ

ದಾರಿದ್ರ್ಯವ ತೊಲಗಿಸಲು ಬಾರಮ್ಮ
ಕರುಣಾಮಯಿ ನೀನಾದೆಯಮ್ಮ
ಗೆಜ್ಜೆಯ ನಾದ ತುಂಬಲಿ ಮನೆಯಲ್ಲಿ
ಬಕ್ತಿ ಬಾವ ಹರಡಲಿ ಮನದಲ್ಲಿ

ಹಾಕಿದೆನು ಅಶ್ಟದಳ ರಂಗವಲ್ಲಿ
ಬಂದು ನೆಲಸು ನೀ ಅಲ್ಲಿ
ಪಟಿಸಲು ನಿನ್ನ ನಾಮ
ಸಾರ‍್ತಕವಾಗಲಿ ಜನ್ಮ

(ಚಿತ್ರ ಸೆಲೆ: freepngimg.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: