ಎಲೆಕೋಸು ಪಕೋಡ

ಅನುಶ ಮಲ್ಲೇಶ್.

Elekosu Pakoda, ಎಲೆಕೋಸು ಪಕೋಡ

ಬೇಕಾಗುವ ಸಾಮಗ್ರಿಗಳು:

  • 2 ಕಪ್ ಹೆಚ್ಚಿದ ಎಲೆಕೋಸು
  • 1 ಈರುಳ್ಳಿ
  • 2 ಹಸಿಮೆಣಸಿನಕಾಯಿ
  • 1/2 ಕಪ್ ಹೆಚ್ಚಿದ ಕರಿಬೇವಿನ ಸೊಪ್ಪು
  • ಹೆಚ್ಚಿದ ಕೊತ್ತಂಬರಿ ಸೊಪ್ಪು 1/2 ಕಪ್
  • 2 ಟೇಬಲ್ ಸ್ಪೂನ್ ಕಡ್ಲೆಹಿಟ್ಟು
  • 2 ಟೇಬಲ್ ಸ್ಪೂನ್ ಅಕ್ಕಿ ಹಿಟ್ಟು
  • 1 ಟೇಬಲ್ ಸ್ಪೂನ್ ಕಾದ ಎಣ್ಣೆ
  • ರುಚಿಗೆ ತಕ್ಕಶ್ಟು ಉಪ್ಪು
  • ಅಚ್ಚ ಕಾರದಪುಡಿ

 

ಮಾಡುವ ಬಗೆ:

ಒಂದು ಬಟ್ಟಲಿನಲ್ಲಿ ಎಲೆಕೋಸು, ಹೆಚ್ಚಿದ ಈರುಳ್ಳಿ, ಹೆಚ್ಚಿದ ಹಸಿಮೆಣಸಿನಕಾಯಿ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಕಡ್ಲೆಹಿಟ್ಟು, ಅಕ್ಕಿ ಹಿಟ್ಟು, 1/2 ಚಮಚ ಅಚ್ಚ ಕಾರದಪುಡಿ, ಕಾದ ಎಣ್ಣೆ ಮತ್ತು ರುಚಿಗೆ ಬೇಕಾದಶ್ಟು ಉಪ್ಪು ಹಾಕಿಕೊಂಡು ಕಲಸಿಕೊಳ್ಳಿ. ಬೇಕಾದರೆ ಸ್ವಲ್ಪ ನೀರು ಹಾಕಿಕೊಂಡು ಗಟ್ಟಿಯಾಗಿ ಕಲಸಿಕೊಳ್ಳಿ. ನಂತರ ಕಾದ ಎಣ್ಣೆಯಲ್ಲಿ ಹಾಕಿ ಕರಿಯರಿ.

ಬಿಸಿ ಬಿಸಿಯಾದ ಪಕೋಡವನ್ನು ಟೊಮೋಟೊ ಸಾಸ್ ಜೊತೆ ತಿನ್ನಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications