ಯಾವಾಗ? ಎಲ್ಲಿಂದ?

– ಚಂದ್ರಗೌಡ ಕುಲಕರ‍್ಣಿ.

ಮುಗಿಲು ಮೋಡ ಮಳೆ ಮುತ್ತ ಹನಿಗಳು
ಸುರಿಯುವದ್ಯಾವಾಗ?
ಹಳ್ಳಕೊಳ್ಳ ನದಿಯಲಿ ನೀರು
ಹರಿಯುವದ್ಯಾವಾಗ?

ನೆಲದಲಿ ಬಿದ್ದ ಬೀಜ ಮೊಳೆತು
ಚಿಗಿಯುವುದ್ಯಾವಾಗ?
ಬೂಮಿ ಉದ್ದಕು ಹಚ್ಚ ಹಸಿರನು
ಚಲ್ಲುವುದ್ಯಾವಾಗ?

ಸುಡು ಸುಡು ಬೆಂಕಿ ಉಂಡೆಯ ಸೂರ‍್ಯನು
ತಂದಿದ್ದೆಲ್ಲಿಂದ?
ಅಮ್ರುತ ರುಚಿಯ ಬೆಳಕು ಚಂದ್ರಗೆ
ಬಂದದ್ದೆಲ್ಲಿಂದ?

ಉರಿಉರಿ ಬಿಸಿಲಿಗೆ ಹೆದರದೆ ಹಸಿರು
ಚಿಮ್ಮುವುದೆಲ್ಲಿಂದ?
ಚಿಗುರುಹೂಮಿಡಿ ಕಾಯಿಹಣ್ಣು
ಹೊಮ್ಮುವುದೆಲ್ಲಿಂದ?

ನೀರಲಿ ಆಟ ಆಡುವ ಮೀನಿಗೆ
ನೆಗಡಿ ಏತಕೆ ಬಂದಿಲ್ಲ?
ಬಿಸಿಲಲಿ ಅರಳಿ ನಗುವ ಹೂವಿನ
ಮುಕವು ಏತಕೆ ಬಾಡಿಲ್ಲ?

(ಚಿತ್ರ ಸೆಲೆ: freegreatpicture.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: