ಬದುಕ ಬೆಳಗಿದ ದೇವರು ನೀವು

– ಶರಣು ಗೊಲ್ಲರ.

ಗುರುಗಳೇ ಇನ್ನು ಹೊರಟೆವು ನಾವು
ಉನ್ನತ ಶಿಕ್ಶಣಕ
ಉನ್ನತ ಶಿಕ್ಶಣ ಪಡೆದು ಒಂದು
ಸಾದನೆ ಮಾಡುದಕ

ತಮ್ಮ ಕರುಣದಿಂದ
ಮನುಜರಾದೆವು
ವಿದ್ಯೆ ನೀಡಿ ಬದುಕ ಬೆಳಗಿದ
ದೇವರು ನೀವು

ತಂದೆ-ತಾಯಿ ಮನೆಯೋಚನೆ
ಎಲ್ಲಾನೂ ಮರತು
ತಿಳಿದವರಾಗಿ ಹೊರಟೆವು
ವಿದ್ಯೆಯ ಕಲಿತು

ನಾವು ಮಾಡಿದ ತಪ್ಪು-ಒಪ್ಪನು
ಎಲ್ಲವನೂ ಮನ್ನಿಸಿ
ಕಳುಹಿಸಿ ಕೊಡ್ರಿ ಸಂತಸದಿಂದ
ನಮ್ಮನ್ನು ಕ್ಶಮಿಸಿ

ಗುರುದಕ್ಶಿಣೆಯ ಕೊಡಲು ನಮಗೆ
ತೋಚದು ಏನೂ ಇಂದು
ಸಾದನೆ ಕೀರ‍್ತಿಯ ತರುವೆವು ನಾವು
ತಮ್ಮಯ ಮುಂದು

ತಮ್ಮಯ ಪ್ರೀತಿ-ಕರುಣೆ ಎಂದಿಗೂ
ನಮ್ಮ ಮೇಲಿರಲು
ಗೆಲ್ಲುವೆವು… ಆಶೀರ‍್ವಾದ
ತಮ್ಮದೆ ಇರಲಿ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: