ನಮ್ಮಿಬ್ಬರದು ಒಳ್ಳೆಯ ಜೋಡಿ

– ಸುರಬಿ ಲತಾ.

ಪದೇ ಪದೇ ಕಣ್ಣ ಮುಂದೆ ಬಂದೆ
ನಿನ್ನ ನೋಡಿ ಮಂಜಿನಂತೆ ಕರಗಿ ಹೋದೆ
ಮರೆಯಾದರೂ ಒಂದು ಕ್ಶಣ
ನೊಂದು ಬಿಡುವೆ ಜಾಣ

ಅಲೆದೆ ಹಗಲಿರುಳು ನಾನು
ಪ್ರೀತಿ ಏನೆಂದು ತಿಳಿಸಿದೆ ನೀನು
ಎದೆಯಲ್ಲಿ ನಿನದೇ ಚಿತ್ರ
ಹೇಳಲೇನೋ ನಾಚಿಕೆ ನಿನ್ನ ಹತ್ರ

ಗೆಳತಿ ಬಾ ಬಾರೆ, ಮದುವ ನೀ ತಾರೆ
ಅರಿತೆ ಮನದ ಬಯಕೆ, ಕೊಡುವೆ ಸಿಹಿ ಕಾಣಿಕೆ
ನುಡಿಯದಿರು ಏನೊಂದು ಮಾತನು
ಕೇಳುವೆ ಎದೆಯ ರಾಗವನ್ನು

ಸಿಹಿ ಗೆಳತಿ ನೀನಿನ್ನು ಸೇರು ಎದೆಯ ಗೂಡನ್ನು
ಹಾಡುವಾ ಒಲವಿನ ಗೀತೆಯನ್ನು
ನಗುವಲ್ಲೇ ಮಾಡಿದೆ ಮೋಡಿ
ನಮ್ಮಿಬ್ಬರದು ಒಳ್ಳೆಯ ಜೋಡಿ

(ಚಿತ್ರ ಸೆಲೆ: pexels.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: