ಬಾರೆ ನೀ ಓ ತಂಗಾಳಿ

– ಸುರಬಿ ಲತಾ.

ಒಲವು, ಪ್ರೀತಿ, ಕವಿತೆ, ಓಲೆ, love, letter, poem

ತಂಪಾಗಿ ಬೀಸುವ ಓ ಗಾಳಿ
ಹೋಗೆ ಒಂದು ಮಾತು ಕೇಳೆ

ನನ್ನೆದೆಯ ಒಂದು ಮಾತನು
ಕೇಳದಾದ ದೂರದ ಇನಿಯನು
ತೇಲಿ ಹೋಗಿ ತಲುಪಿಸು
ನನ್ನ ಈ ಪ್ರೇಮ ಸಂದೇಶವನು

ದೇವಾಲಯ ಕದವ ಮುಚ್ಚಿಹುದು
ಕಾಣದ ದೇವನನ್ನು ನೆನೆಯಲಿ ಹೇಗಿನ್ನು
ದಾರಿ ಕಾಣದೆ ನೊಂದಿಹೆ ನಾನು
ಸೇವೆ ಸಲ್ಲಿಸಲಿ ಹೇಗೆ ಹೇಳು ನೀನು

ಕನಸುಗಳೆಲ್ಲಾ ಕರಗುತಿದೆಲ್ಲಾ
ನುಡಿಯಲಾರದೆ ನೊಂದೆನಲ್ಲಾ
ಕಣ್ಣು ಬಯಸುತಿದೆ ಕಾಣಲವನ
ಕರೆ ತಾರೆ ಬಿಡದೆ ನನ್ನಿನಿಯನ

ಅವಿತ ನೋವು ಬಗೆಹರಿಯಬೇಕಿನ್ನು
ಮನದ ಬಯಕೆ ತಿಳಿಸಿ ಹೇಳಲು
ಆಲಿಸಬೇಕು ನನ್ನ ಈ ಅಳಲು
ಒಂದಾಗಬೇಕಿದೆ ಇಬ್ಬರ ಒಡಲು

ಬಾರೆ ನೀ ಬಾರೇ ಓ ತಂಗಾಳಿ
ಹೋಗೆ ಒಂದು ಮಾತು ಕೇಳೆ

(ಚಿತ್ರ ಸೆಲೆ: pixnio.com)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Sandeep A says:

    ??

  2. Ganesh Mayya says:

    ????

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *