ಕಟ್ಟಿಕೊಂಡು ಬಂದ ಆ ಕನಸಿನ ಬುತ್ತಿ

– ಈಶ್ವರ ಹಡಪದ.

ಕನಸು ಹೊತ್ತು ಬಂದವರು, dreams, failure

ಪುಟ್ಟ ಪುಟ್ಟ ಆಸೆಗಳ ಬುತ್ತಿಕಟ್ಟಿಕೊಂಡು
ಹೆಗಲ ಮೇಲೆ ಬ್ಯಾಗೊಂದನ್ನು ಹೊತ್ತುಕೊಂಡು
ಪಟ್ಟಣವ ಸೇರಿದೆ ಅಬಿಯಂತರನಾಗಲು
ಪದವಿಯೊಂದು ಪಡೆದುಕೊಂಡು
ಕಂಪನಿಯೊಂದು ಸೇರಿ ದುಡಿದು
ಅಪ್ಪ-ಅಮ್ಮ, ಅಣ್ಣ-ತಮ್ಮನನ್ನು
ಚಂದದಿಂದ ನೋಡಿಕೊಳ್ಳಲು

ಮಾಯಾನಗರಿ ಬೆಂಗಳೂರಿನ ಮಾಯೆ
ಹೇಳಿತು, “ನನಗೆ ನಿನ್ನ ಕನಸುಗಳು
ಇಲ್ಲಿ ಮಾಮೂಲಿ, ವಿಚಾರಿಸು ದೊಡ್ಡದಾಗಿ”
ಸೇರುತಿರಲು ಗೆಳೆಯರ ಬಳಗ ಕಾಲೇಜಿನಲಿ
ಮದ್ಯಪಾನ ದೂಮಪಾನದಿಂದ ದೂರವಿರುವೆನೆಂದು
ಮರೆತೋಯ್ತು ಅಪ್ಪನಿಗೆ ಕೊಟ್ಟ ಬಾಶೆ ಅಂದು

ತುಂಡುಡುಗೆಯ ಹುಡುಗಿಯರ ಕಂಡು
ಹೀರೊ ಆಗಲೆಂದು ಅವರ ಎದಿರು
ಅಪ್ಪ ಬೆವರು ಸುರಿಸಿ ದುಡಿದ ಹಣದಲ್ಲಿ
ಬಾಯಾರದಿದ್ದರು ಅರ‍್ದ ಕೋಲಾ
ಕುಡಿದು ಬಿಸಾಡಿದೆ ಇನ್ನು ಅರ‍್ದವನ್ನು

ಕಳೆದಿರಲು ನಾಲ್ಕು ಸಂವತ್ಸರಗಳು
ಕಣ್ಣೀರು ಕಣ್ಣಂಚಲಿ
ಸಾದಿಸಬೇಕಾದನ್ನು ಸಾದಿಸಲಾರದ್ದಕ್ಕೆ
ಕಟ್ಟಿಕೊಂಡು ಬಂದ ಆ ಕನಸಿನ
ಬುತ್ತಿಯ ತಗೆದು ಬಿಚ್ಚಲಾರದ್ದಕ್ಕೆ
ಪದವಿಯಲ್ಲೂ ಪೇಲಾಗಿ, ಬದುಕಲ್ಲೂ ಪೇಲಾಗಿ
ಮತ್ತೆ ನಮ್ಮ ಹಳ್ಳಿದಾರಿ ಹಿಡಿಯುತಿರೋದಕ್ಕೆ

(ಚಿತ್ರ ಸೆಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications