ಇದುವೇ ಸತ್ಯ ಕಾಣಿರಾ
ಹೌದು ನಾವೇಕೆ ಓಡುತ್ತಿದ್ದೇವೆ..?
ಓಡುತ್ತಾ ಓಡುತ್ತಾ ಒದ್ದಾಡುತ್ತಿದ್ದೇವೆ
ಗದ್ದುಗೆ, ಕಿರೀಟ, ಕಾಂಚಣಕ್ಕಾಗಿ ಜೋಲಾಡುತ್ತ
ಸುತ್ತಲಿನ ಜಗದಿಂದ ದೂರಾಗುತ್ತ
ಅದೇ ಸುಕವೆಂಬ ಬ್ರಮೆಯಲ್ಲಿ
ಮತ್ತದೇ ಸಾದನೆಯೆಂಬ ಸಂಬ್ರಮದಲ್ಲಿ
ನಿಜ ಜೀವನದ ಸವಿ ಮರೆಯುತ್ತ
ತಳುಕು ಬಳುಕು ಹುಳುಕಲಿ ಮೆರೆಯುತ್ತ
ಸ್ನೇಹ ಪ್ರೀತಿ ಬಾಂದವ್ಯ ತೊರೆಯುತ್ತ
ಅದಿಕಾರದ ಅಂತಸ್ತಲಿ ತೇಲುತ್ತ
ಮುಕವಾಡವ ಹೊತ್ತು ತಿರುಗುತಲಿ
ಕ್ರುತಕ ಜೀವನವ ತೋರುತಲಿ
ಜಿದ್ದಿನಿಂದ ಹಿಂದೆ ಸರಿದು
ಪುಟ್ಟ ಪುಟ್ಟ ಕುಶಿಯನಿಡಿದು
ಒಮ್ಮೆ ನಿಂತು ನಕ್ಕು ನಲಿದು
ಸಿಹಿ-ಕಹಿಯ ಸವಿಯನುಂಡು
ಬಾಳಬಂಡಿ ಎಳೆಯುವಾ
ನಾವ್ ಸಾವಕಾಶ ನಡೆಯುವಾ
ಕಟ್ಟಕಡೆಗೆ ದಿಟ್ಟನಡಿಗೆ
ಸಹಜತೆಯ ದಿಕ್ಕಿನೆಡೆಗೆ
ಸರಳತೆಯ ಬದುಕಿನೆಡೆಗೆ
ಮನುಶ್ಯತ್ವದ ಜೊತೆಯು ನಮಗೆ
ಇದುವೇ ಸತ್ಯ ಕಾಣಿರಾ
ನಮಗಿದುವೇ ಸಗ್ಗ ನೋಡಿರಾ…
(ಚಿತ್ರ ಸೆಲೆ: unsplash.com)
ಬೆಳಕಿನ ಗುಡಿಸಲಿನಿಂದ ಕತ್ತಲೆಯ ಅರಮನೆಯೆಡೆಗಿನ ನಮ್ಮ ಪಯಣದ ಅನಿಸಿಕೆಯ ಬರಹದ ತುಣುಕನ್ನು ಪ್ರಕಟಿಸಿದ್ದಕ್ಕೆ ನನ್ನಿ…
ಡಿಜಿ ನಾಗರಾಜ ಹರ್ತಿಕೋಟೆ ರವರ ಕವನ ತುಂಬಾ ಚೆನಾಗಿದೆ.