ಮಳೆಹನಿಗೆ ಹಸಿರಿನ ಕಾತರ

ವೀರೇಶ್ ಕೆ ಎಸ್.

ಮಳೆ-ಹಸಿರು, Rain-Green

ಮಣ್ಣಿಗೆ ಬಾನಿನ ಹನಿಗಳ ಆತುರ
ಮಳೆಹನಿಗೆ ಮಣ್ಣಿನ ಹಸಿರಿನ ಕಾತರ

ನದಿಗೆ ಸಾಗರ ಸೇರುವ ಆತುರ
ಸಾಗರಕೆ ನದಿಗಳ ಸಿಹಿಯ ಕಾತರ

ಕವಿಗೆ ಕವನದ ಸಾಲುಗಳ ಆತುರ
ಕವನಕೆ ಬಾವದ ಜನನದ ಕಾತರ

ಸಂಗೀತಕೆ ನುಡಿಸುವ ಸ್ಪರ‍್ಶದ ಆತುರ
ಸ್ಪರ‍್ಶಕೆ ಸುಮದುರ ಸಂಗೀತದ ಕಾತರ

ಮಗುವಿಗೆ ಮದುರ ನಗುವಿನ ಆತುರ
ನಗುವಿಗೆ ನಗಿಸುವ ಮನಸಿನ ಕಾತರ

ಕಣ್ಣಿಗೆ ಕಣ್ಮಣಿಯ ನೋಡುವ ಆತುರ
ಮನಸಿಗೆ ಪ್ರೇಮದ ಬಾಶೆಯ ಕಾತರ

ಪ್ರೀತಿಗೆ ಮನಸಿನ ಮಿಲನದ ಆತುರ
ಈ ಮಿಲನಕೆ ಸವಿಸವಿ ಸಮಯದ ಕಾತರ

(ಚಿತ್ರಸೆಲೆ: pnnl.gov )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: