ಕಾಬೂಲ್ ಕಡ್ಲೆ ಉಸಲಿ!

– ಕಲ್ಪನಾ ಹೆಗಡೆ.

ಕಾಬೂಲ್ ಕಡ್ಲೆ Kabul Kadle
ಏನೇನು ಬೇಕು?

1/2 ಕೆ.ಜಿ. ಕಾಬೂಲ್ ಕಡ್ಲೆ
ಕಾಲು ಹೋಳು ಕಾಯಿತುರಿ
4 ಹಸಿಮೆಣಸಿನಕಾಯಿ
ಇಂಗು
ಅರ‍್ದ ಚಮಚ ಜೀರಿಗೆ
ಕರಿಬೇವು
ಎಣ್ಣೆ
ಅರ‍್ದ ಚಮಚ ನಿಂಬೆ ಹಣ್ಣಿನ ರಸ

ಮಾಡೋದು ಹೇಗೆ?

ಮೊದಲು ಕಾಬೂಲ್ ಕಡ್ಲೆಯನ್ನು 4 ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಬೇಕು. ಆನಂತರ ಒಂದು ಪಾತ್ರೆಯಲ್ಲಿ ನೀರು, ರುಚಿಗೆ ತಕ್ಕಶ್ಟು ಉಪ್ಪು ಹಾಕಿ ಬೇಯಿಸಿಕೊಳ್ಳಬೇಕು. ಸ್ವಲ್ಪ ಕಾಯಿತುರಿ, ಹಸಿಮೆಣಸಿನಕಾಯಿ, ಜೀರಿಗೆ, ಇಂಗನ್ನು ಮಿಕ್ಸಿ ಮಾಡಿಕೊಳ್ಳಿ. ಬಳಿಕ ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕಾದ ಬಳಿಕ ಸಾಸಿವೆ, ಚಿಟಿಕೆ ಇಂಗು, ಕರಿಬೇವು ಜೊತೆಗೆ ನೀವು ಮಿಕ್ಸಿಯಲ್ಲಿ ಮಾಡಿಟ್ಟ ಕಲಕವನ್ನು ಹಾಕಿ ಸ್ವಲ್ಪ ಹುರಿದುಕೊಳ್ಳಿ.

ಆಮೇಲೆ ಬಾಣಲೆಗೆ ಬೇಯಿಸಿಟ್ಟ ಕಾಬೂಲ್ ಕಡ್ಲೆಯನ್ನು ಹಾಕಿ (ನೀರನ್ನು ಬಸಿದುಕೊಂಡು ಕಾಬೂಲ್ ಕಡ್ಲೆಯನ್ನು ಮಾತ್ರ ಹಾಕಬೇಕು). ಮತ್ತೆ ಸ್ವಲ್ಪ ಕಾಯಿತುರಿಯನ್ನು ಹಾಕಿ ಸೌಟಿನಿಂದ ಚೆನ್ನಾಗಿ ಕಲಸಿ. ಆಮೇಲೆ ಕಾಬೂಲ ಕಡ್ಲೆ ಉಸಲಿಗೆ ಸ್ವಲ್ಪ ನಿಂಬೆಹಣ್ಣಿನ ರಸ ಹಾಕಿ ಕಲಸಿ ತಿನ್ನಲು ನೀಡಿ.

(ಚಿತ್ರ ಸೆಲೆ: ಕಲ್ಪನಾ ಹೆಗಡೆ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: