ಕಣ್ಣು ಮುಚ್ಚಿ ಕುಳಿತೆ ನಾನು

– ಮಲ್ಲು ನಾಗಪ್ಪ ಬಿರಾದಾರ್.

ಬಾವನೆ, Feelings

ಕಣ್ಣು ಮುಚ್ಚಿ ಕುಳಿತೆ ನಾನು
ನೆನಪು ಒಂದು ದಾಳಿ ಮಾಡಿ
ದಿಕ್ಕು ತಪ್ಪಿಸಲು ಆಯಿತು ಸಜ್ಜು

ಮಂತ್ರ ಜಪಿಸುವ ಮುಂಚೆಯೇ
ಪವಾಡ ಬಗ್ನವಾದಂತೆ
ಬೀದಿಗೆ ಬಂದವು ಬಾವನೆಗಳು

ಹಳೆಯ ಹೋರಾಟದ ಹೊರೆ
ಮತ್ತೆ ಹೆಗಲ ಮೇಲೆ!
ದೂರ ಕ್ರಮಿಸುವುದು ಹೇಗೆ?

ಸೋತ ಮೇಲೆ
ಕಲಿತ ಪಾಟ
ಹಾಗೆ ಉಂಟು ಗೆಲುವ ಹಟ

ಕಣ್ಣ ಹನಿ ಜಾರಿ
ಮನದ ಬಾರ ತಗ್ಗಿ
ನನ್ನದಾಯಿತು ನೆಮ್ಮದಿ

(ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: