ಶಾವಿಗೆ ಪಾಯಸ
– ಸವಿತಾ.
ಬೇಕಾಗುವ ಸಾಮಾನುಗಳು
- ಶಾವಿಗೆ – 1 ಲೋಟ
- ನೀರು – 2 ಲೋಟ
- ಹಾಲು – 2 ಲೋಟ
- ಬೆಲ್ಲ – ಅರ‍್ದ ಬಟ್ಟಲು
- ತುಪ್ಪ – ಸ್ವಲ್ಪ
- ಗೋಡಂಬಿ – 10
- ದ್ರಾಕ್ಶಿ – 10
- ಲವಂಗ – 2
- ಏಲಕ್ಕಿ – 2
ಮಾಡುವ ಬಗೆ
ನೀರು ಕುದಿಯಲು ಇಟ್ಟು, ಕುದಿ ಬಂದ ನಂತರ ಶಾವಿಗೆ ಸೇರಿಸಿ, ಕೊಂಚ ಹೊತ್ತು ಕುದಿಸಿ ಇಳಿಸಿ ಇಡಿ. ಶಾವಿಗೆ 3-4 ನಿಮಿಶದಲ್ಲಿ ಕುದಿಯುತ್ತದೆ. ಎರಡು ಚಮಚ ತುಪ್ಪದಲ್ಲಿ ಗೋಡಂಬಿ, ದ್ರಾಕ್ಶಿ ಸ್ವಲ್ಪ ಹುರಿದು ತೆಗೆದಿಟ್ಟುಕೊಳ್ಳಿ.
ಏಲಕ್ಕಿ ಮತ್ತು ಲವಂಗ ಪುಡಿ ಮಾಡಿ, ಕುದಿಸಿಟ್ಟ ಶಾವಿಗೆಗೆ ಸೇರಿಸಿ. ಇದಕ್ಕೆ ಬೆಲ್ಲ ಅತವಾ ಮುದ್ದಿ ಸಕ್ಕರೆ, ಬಿಸಿ ಹಾಲು ಮತ್ತು ತುಪ್ಪ ಸೇರಿಸಿ ಕಲಸಿ. ಮೇಲೆ ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಶಿ ಹಾಕಿ ತಿನ್ನಲು ಕೊಡಿ.
(ಚಿತ್ರ ಸೆಲೆ: ಸವಿತಾ)
ಇತ್ತೀಚಿನ ಅನಿಸಿಕೆಗಳು