ಇವರೇಕೆ ಹೀಗೆ?

ಎಂ. ಎನ್. ಮೋಹನ್ ಕುಮಾರ್ ಹರ‍್ತಿಕೋಟೆ.

ಓದು-ಬರಹದಲಿ ಮುಂದು
ಬುದ್ದಿವಂತಿಕೆಯಲಿ ಮುಂದು
ಮಾತಿನಲಿ ಮುಂದು
ವಿಶಯದ ಆಳದಲಿ ತುಸು ಹಿಂದೆ
ಇವರೇಕೆ ಹೀಗೆ?

ಕೆಲಸ ಮಾಡಿಸುವುದರಲಿ ಮುಂದು
ತಪ್ಪು ಹುಡುಕುವುದರಲಿ ಮುಂದು
ಜವಾಬ್ದಾರಿಯಲಿ ತುಸು ಹಿಂದೆ
ಇವರೇಕೆ ಹೀಗೆ?

ಸಹಾಯ ಮಾಡಲು ಯೋಚಿಸುವುದರಲಿ ಮುಂದು
ಇತರರ ನಿಂದನೆಗೆ ತಾ ಮುಂದು
ತಾ ಮಾಡುವ ಕಾಯಕದಲಿ
ತುಸು ಸರಿ-ತಪ್ಪು ನೋಡಲ್ಲ
ಇವರೇಕೆ ಹೀಗೆ?

ತುಸು ಸಮಯ ಸುಗ್ನಾನಿ
ಕೆಲ ಸಮಯ ವಿಗ್ನಾನಿ
ಅರೆ ಗಳಿಗೆ ತತ್ವಗ್ನಾನಿ
ತಾಳ್ಮೆ ಸ್ವಲ್ಪ ಕಡಿಮೆ
ಇವರೇಕೆ ಹೀಗೆ?

(ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: