ಶ್ರಾವಣ ಸಂಬ್ರಮ

– ವೆಂಕಟೇಶ ಚಾಗಿ.

greenery, ಶ್ರಾವಣ, ಹೊಸತನ, newness

ದಗದಗಿಸಿ ಬಸವಳಿದ
ಬೂತಾಯಿ ಒಡಲು
ನೇಸರನ ಕೋಪವೆನಿತೋ
ಉಸಿರು ಬಯಕೆ ದಾಹವೆನಿತೋ
ನಿರೀಕ್ಶೆ ನಿರ‍್ಮಲದ ತವಕವೆನಿತೋ
ಕತ್ತಲಾಗಿಸುತಲಿ ಬಾನು
ಮತ್ತೆ ಬಂದಿಳಿಯುತಿದೆ ತಂಪು
ತಂಪಿನಲಿ ಇಂಪಿನಲಿ ಕಂಪಿನಲಿ
ಮರಳಿ ಬಂದಿವುದು ಶ್ರಾವಣ
ಜಗದ ಸಂಬ್ರಮಕೆ ಕಾರಣ

ಮಣ್ಣ ಗರ‍್ಬದಲಿ
ಅವಿತಿರ‍್ಪ ಜೀವಕ್ಕೆ
ಜೀವ ತುಂಬುತಲಿ
ಮರಳಿ ಬಂದಿವುದು ಶ್ರಾವಣ
ಹಕ್ಕಿ ಹಾಡಿಗೆ ಮದುರ ದ್ವನಿಯ ತುಂಬುತಲಿ
ಹಸಿದ ಒಡಲಿಗೆ ಅನ್ನದೋಕುಳಿ
ಬಾನು ಕಡಲಿಗೆ ಮತ್ತೆ ಸವಕಳಿ
ಹಸಿರು ಚೆಲ್ಲಿದೆ ಶ್ರಾವಣ
ಜಗದ ಸಂಬ್ರಮಕೆ ಕಾರಣ

ಬಾವ ಸಾಗರದೊಳಗೆ
ಕವಿಯ ಕಲ್ಪನೆ ಗಳಿಕೆ
ದೇವ ಸ್ರುಶ್ಟಿಯ ಸೊಬಗು
ಸೂರ‍್ಯ ರಶ್ಮಿಯ ಹೊನಲು
ಅವತರಿಸಿ ಅನುವಾದಿಸಿ
ಆಲಿಂಗಿಸಿದೆ ನವ ಶ್ರಾವಣ
ಬಂತು ಶ್ರಾವಣ ಹೊಸತು ಶ್ರಾವಣ
ಜಗದ ಸಂಬ್ರಮಕೆ ಕಾರಣ

(ಚಿತ್ರ ಸೆಲೆ: pexels.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: