ಆಳವಿ ಪಾಯಸ
– ಸವಿತಾ.
ಬಾಣಂತಿಯರ ಆರೈಕೆ ಮಾಡುವಾಗ ಅವರಿಗೆ ಆಳವಿಯನ್ನು ಕೊಡುವುದುಂಟು. ಚಳಿಗಾಲದಲ್ಲೂ ಈ ಆಳವಿ ಪಾಯಸವನ್ನು ಮಾಡುತ್ತಾರೆ.
ಏನೇನು ಬೇಕು?
- ಆಳವಿ – 1/2 ಬಟ್ಟಲು
- ಹಾಲು – 1/2 ಬಟ್ಟಲು
- ನೀರು – 1/2 ಬಟ್ಟಲು
- ಬೆಲ್ಲ ಅತವಾ ಸಕ್ಕರೆ – 3/4 ಬಟ್ಟಲು
- ತುಪ್ಪ – 1/4 ಬಟ್ಟಲು
ಮಾಡುವ ಬಗೆ
ಒಲೆಯ ಮೇಲೆ ನೀರು ಕಾಯಲು ಇಟ್ಟು ಕುದಿ ಬಂದ ಮೇಲೆ, ಆಳವಿ ಸೇರಿಸಿರಿ. ಸಕ್ಕರೆ ಅತವಾ ಬೆಲ್ಲ ಹಾಕಿ ಚಮಚದಿಂದ ತಿರುಗಿಸಿ. ಹಾಲು ಮತ್ತು ತುಪ್ಪ ಹಾಕಿ ಒಂದು ಕುದಿ ಬರುವವರೆಗೆ ಕುದಿಸಿರಿ.
ಸಕ್ಕರೆ ಕರಗಿ ಆಳವಿ ಕುದಿಯಬೇಕು. ಆಳವಿ ಪಾಯಸ ಸವಿಯಲು ತಯಾರು. ಬಿಸಿಬಿಸಿಯಾಗಿದ್ದಾಗಲೇ ಸವಿಯಲು ಚೆನ್ನಾಗಿರುತ್ತದೆ.
(ಚಿತ್ರ ಸೆಲೆ: ಸವಿತಾ)
ಇತ್ತೀಚಿನ ಅನಿಸಿಕೆಗಳು