ಕವಿತೆ: ಹಕ್ಕಿಯ ಮನೆ

– ವೆಂಕಟೇಶ ಚಾಗಿ.

bird, nest, ಗುಬ್ಬಿ ಗೂಡು, ಹಕ್ಕಿ, ಮನೆ

ಮನೆ ಕಟ್ಟಬೇಕು ನನ್ನ ಹಾಗೆ
ಮನ ಮುಟ್ಟಬೇಕು ಮುಗಿಲ ಹಾಗೆ
ಜೀವ ಜೀವಿಗಳ ಮೆಟ್ಟಿ ನಿಲ್ಲದೆ
ದರೆಯನೆಂದು ಬಿಟ್ಟು ಹೋಗದೆ
ಮನೆ ಕಟ್ಟಬೇಕು ನನ್ನ ಹಾಗೆ
ಮನ ಮುಟ್ಟಬೇಕು ಮುಗಿಲ ಹಾಗೆ

ತಂಪಾದ ಗಾಳಿ ಮನೆಯ ತೂಗಿ
ಹಸಿರಾದ ಗರಿಕೆ ತುಸು ಬೆಚ್ಚಗಿರಿಸಿ
ಗುಟುಕುಗಳೇ ಆಸ್ತಿ ಉಳಿದೆಲ್ಲ ನಾಸ್ತಿ
ಜೋಕಾಲಿ ಜೀಕಲಿ ಜೋಗುಳದ ದೋಸ್ತಿ
ಮನೆ ಕಟ್ಟಬೇಕು ನನ್ನ ಹಾಗೆ
ಮನ ಮುಟ್ಟಬೇಕು ಮುಗಿಲ ಹಾಗೆ

ಹೊಸ ಬೆಳಕಿನ ಹೊಸ ಹುಟ್ಟಿಗೆ
ಜೊತೆಗಿದೆ ಬೂಮಾತೆಯ ಸ್ರುಶ್ಟಿ
ದುಶ್ಟತೆಯ ದೂರದಲೇ ದೂರಿಟ್ಟು
ಸುಳಿಯದಲೇ ಮನಕೆಂದು ಪೆಟ್ಟು
ಮನ ಕಟ್ಟಬೇಕು ನನ್ನ ಹಾಗೆ
ಮನ ಮುಟ್ಟಬೇಕು ಮಗಿಲ ಹಾಗೆ

ಸ್ರುಶ್ಟಿಯ ದ್ರುಶ್ಟಿಯಲಿ ಪುಟ್ಟ ಮಗುವಂತೆ
ಸ್ವಚ್ಚ ಸೌಂದರ‍್ಯದ ಹೂವಿನ ಕುಡಿಯಂತೆ
ಆಸೆಗಳ ಬೆಟ್ಟವನು ಮೆಟ್ಟಿ ಬದಿಗೊತ್ತಿ
ಗೊಡವೆ ಇಲ್ಲದ ಗೋಡೆಗೆ ಪ್ರೀತಿ ಮೆತ್ತಿ
ಮನೆ ಕಟ್ಟಬೇಕು ನನ್ನ ಹಾಗೆ
ಮನ ಮುಟ್ಟಬೇಕು ಮುಗಿಲ ಹಾಗೆ

(ಚಿತ್ರ ಸೆಲೆ: boingboing.net)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Bharath Raj says:

    ಸುಂದರ ಕವನ…ಮನದಂತೆ ಮನೆ..

  2. ಮಾರಿಸನ್ ಮನೋಹರ್ says:

    ಸುಂದರವಾಗಿದೆ ಕವಿತೆ

ಮಾರಿಸನ್ ಮನೋಹರ್ ಗೆ ಅನಿಸಿಕೆ ನೀಡಿ Cancel reply

%d bloggers like this: