ಒಲವಿನ ಬಯಕೆ

– ಸುರಬಿ ಲತಾ.

ಎಶ್ಟು ಒಲವಿದೆಯೋ ಅಶ್ಟೇ
ಮುನಿಸು ನಿನ್ನಲ್ಲಿ ಇದೆ
ನಿನ್ನ ಬರುವಿಕೆಗಾಗಿ ಕಾದು
ಕೂತಿದೆ ನನ್ನೆದೆ

ಪ್ರಯತ್ನಿಸಿ ನೋಡು ಮರೆಯಲು
ನನ್ನನು ನೀನು
ನಿನ್ನ ಎದೆಯ ಬಡಿತದ
ರಾಗದಲ್ಲಿ ಕೇಳಿ ಬರುವೆ ನಾನು

ಮರೆಯಲಾಗದು ಎಂದೂ ಆ
ಸಿಹಿ ನೆನಪುಗಳನ್ನು
ಹ್ರುದಯದ ಮೂಲೆಯಲ್ಲಿ
ನನ್ನದೇ ನೆರಳು ಕಾಣುವೆ ನೀನು

ಪ್ರೀತಿಯಲ್ಲಿ ಮಾತುಗಳು ಮರೆಯಾಗಿ
ಮೌನ ತಾಳಿದರೇನು
ಉಸಿರು ಉಸಿರಲ್ಲಿ ನಿನ್ನದೇ
ಹೆಸರು ಹಸಿರಾಗಿರಲು ಬೇಕಿನ್ನೇನು

ಅರ‍್ತವಾಗದ ಈ ಬಂದ
ಅರಿಯೇ ನೀನು
ನಿನ್ನ ಪಡೆಯುವ ಆಸೆಯ
ಬಿಡಲಾರೆ ಎಂದೂ ನಾನು

(ಚಿತ್ರ ಸೆಲೆ: playbuzz.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: