ನೆನಪ ಹಣತೆ ಹಚ್ಚಿಟ್ಟಿದ್ದೇನೆ…

– ವೀರೇಶ.ಅ.ಲಕ್ಶಾಣಿ.

ಒಂಟಿತನ, Loneliness

ಹುಡುಗಿ
ನೀ ಬಿಕ್ಕಿದ ದಿನ
ದಕ್ಕದ ಆ ಬದುಕಿಗಾಗಿ
ಇನ್ನೂ ಹುಡುಕುತ್ತಲೇ ಇದ್ದೇನೆ

ಆಸೆಯ ಆರು ಮೊಳದ ಬಟ್ಟೆಯಲ್ಲಿ
ಚುಕ್ಕಿ ಚಿತ್ತಾರದ ಕನಸ ಮೂಟೆ ಕಟ್ಟಿ
ನೀ ಹೋದ ದಿನದಿಂದ ಬರೀ
ಕೂಡಿ-ಕಳೆವ ಲೆಕ್ಕ
ಹಚ್ಚಿಟ್ಟ ಹಣತೆ ನಂದಿಸುವ ತನಕ
ಬರಿ ನೆನಪು ಮಾತ್ರ

ಬದುಕೆಂಬ ಪಯಣದಲಿ
ಸ್ನೇಹದಾ ಉಗಿ ಬಂಡಿಯಲಿ
ದ್ವೇಶದಾ ಹೊಗೆ ಕಕ್ಕಿ
ಪ್ರೀತಿ ಪ್ರೇಮದ ಹಬೆಯಿಂದ
ಚೇತನದ ಗಾಲಿಗಳ
ಬಾಳ ಪತದ ಹಳಿಗಳ ಮೇಲೆ
ತಳ್ಳುವ ಪರಿ ದಿಟ

ಪಯಣ ಮುಗಿದಾದ ಮೇಲೆ
ಊರಿಗೆ ತೆರಳುವ ಪಯಣಿಗರಂತೆ
ಸ್ನೇಹ ಪಯಣ ತೀರಿದ ಬಳಿಕ
ಬಂದ ಹಾದಿಯ ಹಿಡಿದು ಹೊರಟಿರುವೆವು

ನೀ ಕೊಟ್ಟ ಕನಸುಗಳ ಬಚ್ಚಿಟ್ಟಿದ್ದೇನೆ
ನನ್ನೆದೆಯ ಬಾವನೆಗಳ ಬಿಚ್ಚಿಟ್ಟಿದ್ದೇನೆ
ನೀ ಬಿಕ್ಕಿದ ದಿನ ಉರುಳಿದ ಆ ಕಂಬನಿಯಲ್ಲೇ
ನೆನಪ ಹಣತೆ ಹಚ್ಚಿಟ್ಟಿದ್ದೇನೆ

( ಚಿತ್ರ ಸೆಲೆ: freegreatpicture.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಮಾರಿಸನ್ ಮನೋಹರ್ says:

    ತುಂಬಾ ಚೆನ್ನಾಗಿದೆ ಕವಿತೆ

ಅನಿಸಿಕೆ ಬರೆಯಿರಿ: