ರಾಗಿ ಪಾಲಕ್ ತಾಲಿಪೆಟ್ಟು
ಏನೇನು ಬೇಕು?
- 2 ಬಟ್ಟಲು ರಾಗಿ ಹಿಟ್ಟು
- 1 ಬಟ್ಟಲು ಜೋಳದ ಹಿಟ್ಟು
- 2 ಬಟ್ಟಲು ತೊಳೆದು ಸಣ್ಣಗೆ ಹೆಚ್ಚಿದ ಪಾಲಕ್ ಸೊಪ್ಪು (ಸೊಪ್ಪು ಎಳೆಯದಾಗಿದ್ದರೆ ಇನ್ನೊಂದು ಬಟ್ಟಲು ಸೇರಿಸಬಹುದು)
- 4 ಚಮಚ ಎಳ್ಳು
- 1 ಚಮಚ ಜೀರಿಗೆ
- 1/2 ಚಮಚ ಅರಿಶಿನ ಪುಡಿ
- ರುಚಿಗೆ ತಕ್ಕಶ್ಟು ಉಪ್ಪು
- ಚಿಟಿಕೆ ಚಕ್ಕೆ ಪುಡಿ
ಹೇಗೆ ಮಾಡುವುದು?
ಬಾಣಲೆಗೆ ಸ್ವಲ್ಪವೇ ಎಣ್ಣೆ ಹಾಕಿ. ಜೀರಿಗೆ, ಆನಂತರ ಸೊಪ್ಪು ಚಿಟಿಕೆ ಅರಿಶಿನ, ಚಿಟಿಕೆ ಉಪ್ಪು ಮತ್ತು ಚಿಟಿಕೆ ಚಕ್ಕೆ ಪುಡಿ ಹಾಕಿ ಬಾಡಿಸಿಕೊಳ್ಳಿ. ಬಳಿಕ ಅದನ್ನು ತೆಗೆದು, ಅದೇ ಬಾಣಲೆಗೆ ಒಂದು ಬಟ್ಟಲು ಕುದಿಯುವ ನೀರಿಗೆ ಚಿಟಿಕೆ ಉಪ್ಪು ಅರಿಶಿನ ಪುಡಿ ಹಾಕಿ ಸರಿಯಾಗಿ ಕಲೆಸಿ.
ಮೊದಲಿಗೆ ಜೋಳದ ಹಿಟ್ಟು ಆನಂತರ ರಾಗಿ ಹಿಟ್ಟು ಹಾಕಿ 2 ನಿಮಿಶ ಸಣ್ಣನೆ ಉರಿಯಲ್ಲಿ ಬೇಯಿಸಿ. ಬಳಿಕ ಅದನ್ನುಒಲೆಯ ಮೇಲಿಂದ ಇಳಿಸಿ ಅದಕ್ಕೆ ಮೊದಲೇ ಬಾಡಿಸಿದ ಸೊಪ್ಪು, ಎಳ್ಳು ಮತ್ತು ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ ಚೆನ್ನಾಗಿ ನಾದಿಕೊಳ್ಳಿ ( ಚಪಾತಿ ಹಿಟ್ಟಿನ ಹದಕ್ಕೆ ನಾದಿಕೊಳ್ಳಿ ). ನಿಮಗೆ ಬೇಕೆನಿಸಿದಲ್ಲಿ ಒಂದೆರಡು ಚಮಚ ಗೋದಿ ಹಿಟ್ಟನ್ನು ಸೇರಿಸಿ. ಆನಂತರ ಲಟ್ಟಿಸಿ ಎರಡೂ ಕಡೆ ಎಣ್ಣೆ ಹಾಕಿ ಬೇಯಿಸಿ.
ರಾಗಿ ಪಾಲಕ್ ತಾಲಿಪೆಟ್ಟು ಕಾರವಾದ ಚಟ್ನಿ, ಬೆಣ್ಣೆ ಅತವಾ ಮೊಸರಿನೊಡನೆ ತಿನ್ನಲು ರುಚಿಯಾಗಿರುತ್ತದೆ.
ಇತ್ತೀಚಿನ ಅನಿಸಿಕೆಗಳು