ಕವಿತೆ: ಮತದಾನ

ಶಾಂತ್ ಸಂಪಿಗೆ.

ಮತದಾನ, voting

ನಮ್ಮೆಲ್ಲರ ಕನಸೊಂದೆ
ನವ ಬಾರತ ನಿರ‍್ಮಾಣ
ನಮ್ಮೆಲ್ಲರ ಗುರಿಯೊಂದೆ
ಪ್ರಜಾಪ್ರಬುತ್ವಕೆ ಸನ್ಮಾನ

ಮಾಡ ಬನ್ನಿ ಮತದಾನ
ಇದುವೆ ನಿಮ್ಮ ಶ್ರಮದಾನ
ಹೊಸ ಕನಸ ಬಿತ್ತೋಣ
ಸದ್ರುಡ ದೇಶವ ಕಟ್ಟೋಣ

ಹಣ ಬಲವ ಸೋಲಿಸಿ
ಜನ ಬಲವ ಸ್ತಾಪಿಸೋಣ
ಆಮಿಶ ತಂತ್ರವ ಅಡಗಿಸಿ
ಪ್ರಜಾತಂತ್ರವ ಉಳಿಸೋಣ

ಇಂದೇ ಸಂಕಲ್ಪ ಮಾಡೋಣ
ಜನಶಕ್ತಿಯ ಸಾರೋಣ
ದುಶ್ಟ ಶಕ್ತಿಗಳ ಅಳಿಸೋಣ
ಶಿಶ್ಟ ಜನರನೇ ಆರಿಸೋಣ

ಮತದಾನದ ಮಹತ್ವ ತಿಳಿಸಿ
ಜನರಲಿ ಅರಿವು ಮೂಡಿಸಿ
ಮತದಾನವೆ ಶ್ರೇಶ್ಟ ದಾನ
ಪ್ರಜಾಪ್ರಬುತ್ವಕೆ ಸೋಪಾನ

{ ಚಿತ್ರಸೆಲೆ: eci.gov.in )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Sharanappa Gollar says:

    ಮತದಾನ ಜಾಗೃತಿ ಮೂಡಿಸುವ ಕವಿತೆ ಸುಂದರವಾಗಿದೆ.

Sharanappa Gollar ಗೆ ಅನಿಸಿಕೆ ನೀಡಿ. Cancel reply

Your email address will not be published. Required fields are marked *