ಕವಿತೆ: ಹಾರಿ ಬಂದನೋ ವಸಂತ ಮತ್ತೆ

ಪ್ರಶಾಂತ್ ವಿ ತಾವರೆಕೆರೆ.

ವಸಂತ ಕಾಲ, Spring

ಹಾರಿ ಬಂದನೋ ವಸಂತ ಮತ್ತೆ
ಅರಳಿದ ಮೊಗ್ಗಿಗೆ ಬಣ್ಣ ಬರೆಯುತಾ
ಕಾಲಿ ಕೊಂಬೆಯಲಿ ಚಿಗುರು ಚೆಲ್ಲುತಾ
ಸೋತ ಮರಕೆ ಉಸಿರು ತುಂಬುತಾ
ಮದುವಣಗಿತ್ತಿಯಂತೆ ಶ್ರುಂಗಾರ ಮಾಡುತಾ
ಬಿಸಿಲ ದಗೆಯಲಿ ನೆರಳು ಹಾಸುತಾ

ಹಾರಿ ಬಂದನೋ ವಸಂತ ಮತ್ತೆ
ಚೈತ್ರ ಮಾಸಕೆ ಹಾದಿ ಹೊಸೆಯುತ

ಕೊಂಡು ತಂದನೋ ವಸಂತ ಮತ್ತೆ
ನೇಯ್ದು ಹಸಿರು ಸೀರೆಯ ಇಳೆಯ ತಾಯಿಗೆ
ತಂಪು ನೆರಳನು ಹಕ್ಕಿ ಗೂಡಿಗೆ
ತೂಗು ಮಾವನು ಕಮಾನು ಕೊಂಬೆಗೆ
ಚಿಗುರು ತೋರಣ ಮನೆಯ ಹೊಸಿಲಿಗೆ
ಹಾಡೋ ಸ್ಪೂರ‍್ತಿಯ ಕೋಗಿಲೆ ಕೊರಳಿಗೆ

ಕೊಂಡು ತಂದನೋ ವಸಂತ ಮತ್ತೆ
ಹೊಸತು ಕಾಲವ ಈ ಯುಗಾದಿಗೆ

( ಚಿತ್ರ ಸೆಲೆ: kannada.oneindia.com )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. John Vicco says:

    Chennagide ??

  2. Deeksha P says:

    ಅದ್ಭುತವಾಗಿದೆ?

ಅನಿಸಿಕೆ ಬರೆಯಿರಿ:

Enable Notifications