ಯುಗಾದಿಗೆ ಮಾಡುವ ಬೇವು (ಬೇವಿನ ಪಾನಕ)

ಸುಶ್ಮಾ.

ಬೇವಿನ ಪಾನಕ, Neem Panaka

ನಮ್ಮ ಬಿಜಾಪುರದ(ವಿಜಯಪುರ) ಕಡೆ ಯುಗಾದಿಗೆ ಬೇವಿನ ಪಾನಕ ಮಾಡ್ತೀವಿ. ಅದಕ್ಕ ನಾವು ಬೇವು ಅಂತೀವಿ. ಆದ್ರ ಅದು ಹೆಸರಿಗೆ ವಿರುದ್ದವಾಗಿ ಬಾಳ ಸಿಹಿ ಇರ‍್ತದ. ಬೇವಿನ ಪಾನಕ ಇರಲಾರ‍್ದ ನಮ್ ಕಡೆ ಹಬ್ಬ ಆಗೂದಿಲ್ಲ. ಆರೋಗ್ಯಕ್ಕೂ ಅಶ್ಟ ಚಲೋ ಅದು. ಹಂಗಿದ್ರ ಬೇವು ಹೆಂಗ್ ಮಾಡ್ತೀವಿ ಅಂತಾ ತಿಳಿಸ್ತೀನಿ, ಓದ್ರಿ 🙂

ಬೇವಿನ ಪಾನಕ ಮಾಡಲು ಏನೇನ್ ಬೇಕು?

 • ಗೋಡಂಬಿ – 4-5
 • ಕರ‍್ಜೂರ – 4-5
 • ಬಾಳೆಹಣ್ಣು – 2
 • ಸೇಬುಹಣ್ಣು – 1
 • ಚಿಕ್ಕುಹಣ್ಣು(ಸಪೋಟ) – 2
 • ದ್ರಾಕ್ಶಿಹಣ್ಣು – ಸ್ವಲ್ಪ
 • ಮಾವಿನಕಾಯಿ ತುರಿ – ಸ್ವಲ್ಪ
 • ಏಲಕ್ಕಿ ಪುಡಿ – ಸ್ವಲ್ಪ
 • ಬೇವಿನ ಹೂವು – ಸ್ವಲ್ಪ
 • ಅಜವಾನ/ಓಂ ಕಾಳು – 1 ಚಿಕ್ಕ ಚಮಚದಶ್ಟು
 • ಹುಣಸೆಹಣ್ಣು – ಒಂದು ಹಿಡಿಯಶ್ಟು
 • ಬೆಲ್ಲ – ರುಚಿಗೆ ತಕ್ಕಶ್ಟು

ಮಾಡುವ ಬಗೆ

 • ಗೋಡಂಬಿ ಮತ್ತು ಕರ‍್ಜೂರವನ್ನು ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಿ
 • ಹುಣಸೆಹಣ್ಣನ್ನು ನೀರಿನಲ್ಲಿ ನೆನೆಸಿಡಿ, ಬೆಲ್ಲವನ್ನು ನೀರಿನಲ್ಲಿ ಕರಗಿಸಿ ಇಟ್ಟುಕೊಳ್ಳಿ
 • ಎಲ್ಲಾ ಹಣ್ಣುಗಳನ್ನು ಒಂದೇ ಸಮನಾಗಿ ಕತ್ತರಿಸಿ ಇಟ್ಟುಕೊಳ್ಳಿ
 • ಕತ್ತರಿಸಿದ ಹಣ್ಣುಗಳಲ್ಲಿ ಸ್ವಲ್ಪ ತೆಗೆದುಕೊಂಡು ರುಬ್ಬಿಕೊಳ್ಳಿ.
 • ರುಬ್ಬಿಕೊಂಡ ಮಿಶ್ರಣಕ್ಕೆ ಹುಣಸೆಹಣ್ಣಿನ ರಸ, ಬೆಲ್ಲ ಕರಗಿಸಿದ ನೀರು, ಉಳಿದ ಹಣ್ಣು, ಗೋಡಂಬಿ, ಕರ‍್ಜೂರ, ಏಲಕ್ಕಿ ಪುಡಿ ಮತ್ತು ಅಜವಾನ ಹಾಕಿ ಕಲಸಿ. ಮೇಲೆ ಸ್ವಲ್ಪ ಬೇವಿನ ಹೂವು ಉದುರಿಸಿ.

ಪಾನಕ ಈಗ ತಯಾರು. ಸ್ವಲ್ಪ ಹೊತ್ತು ಪ್ರಿಡ್ಜ್ ನಲ್ಲಿಟ್ಟು ಕುಡಿಯಲು ಕೊಡಿ.

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: