ಕವಿತೆ: ಬರದಾಗಿದೆ ಮರಣವು

– ಶಶಾಂಕ್.ಹೆಚ್.ಎಸ್.

ಒಲವು, ಕೇಳ್ವಿ, love, question

ಯಾಕೋ ಎಲ್ಲವೂ ನೆನಪಾಗಿದೆ
ಕಣ್ಣಂಚಿನಲ್ಲಿ ಕಂಬನಿ ಜಾರಿದೆ
ನನಗೆ ಈ ಬದುಕೇ ಸಾಕಾಗಿದೆ
ಆದರೂ ಬರದಾಗಿದೆ ಮರಣವು

ಆಸೆಯ ಕಂಗಳಲ್ಲಿ ಎದುರು ನೋಡಿದ್ದಾಗಿದೆ
ಎಲ್ಲಾ ಅವಕಾಶಗಳ ಬಾಗಿಲು ಮುಚ್ಚಿಹೋಗಿದೆ
ಮರಳಿ ಬರುವಳೆಂಬ ನಂಬಿಕೆಯು ಸತ್ತು ಹೋಗಿದೆ
ಆದರೂ ಬರದಾಗಿದೆ ಮರಣವು

ವರುಶಗಳು ಉರುಳಿದರೂ
ಹಸಿಯಾಗಿವೆ ನೆನಪುಗಳು
ದಿನಗಳು ಕಳೆದಂತೆ
ಹೆಚ್ಚುತ್ತಲೇ ಇದೆ ದುಕ್ಕವು

ಅವಳಿಲ್ಲದ ಮೇಲೆ
ಎಲ್ಲವೂ ನಶ್ವರವೆನಿಸಿದೆ
ಅವಳು ನೀಡಿದ ಸಿಹಿ ನೆನಪುಗಳ
ಜೊತೆಗೆ ಬದುಕು ದೂಡುವುದಾಗಿದೆ

ಅವಳೆಂಬುದು ಮಾಯೆಯೋ
ಮಾಯೆಯೆಂಬುದೇ ಅವಳೋ
ನನಗೇನು ತಿಳಿಯದಾಗಿದೆ

ಬದುಕೇ ಸಾಕಾಗಿದೆ
ಆದರೂ ಬರದಾಗಿದೆ ಮರಣವು

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: