ಬಾಳಕ ಮೆಣಸಿನಕಾಯಿ

ಸವಿತಾ.

ಬಾಳಕ ಮೆಣಸಿನಕಾಯಿ, Baalaka Menasinakayi

ಏನೇನು ಬೇಕು?

 • 15  ಹಸಿ ಮೆಣಸಿನ ಕಾಯಿ
 • 3 ಬಟ್ಟಲು ಮಜ್ಜಿಗೆ
 • 2 ಚಮಚ ಸಾಬುದಾನಿ
 • 1/2 ಚಮಚ ಜೀರಿಗೆ
 • ಉಪ್ಪು ರುಚಿಗೆ ತಕ್ಕಶ್ಟು

 

ಹೇಗೆ ಮಾಡುವುದು?

 • ಹಸಿ ಮೆಣಸಿನಕಾಯಿ ತೊಳೆಯಿರಿ. ತೊಟ್ಟು ಹಾಗೇ ಇಟ್ಟುಕೊಂಡು, ಮೆಣಸಿನಕಾಯಿಯ ನಡುವೆ ಮಾತ್ರ ಸೀಳಿ ಇಲ್ಲವೇ ಕತ್ತರಿಸಿ
 • ಸೀಳಿದ ಮೆಣಸಿನಕಾಯಿಯನ್ನು ಮಜ್ಜಿಗೆ ಯಲ್ಲಿ ಆರು ಗಂಟೆ ಕಾಲ ನೆನೆ ಹಾಕಬೇಕು (ರಾತ್ರಿ ಹೊತ್ತು ನೆನೆ ಹಾಕಿ ಇಟ್ಟುಕೊಳ್ಳಿ)
 • ಸಾಬುದಾನಿಯನ್ನು ಕೂಡ ಒಂದು ಬಟ್ಟಲಲ್ಲಿಎರಡು ಚಮಚ ನೀರು ಸೇರಿಸಿ ನೆನೆ ಹಾಕಿ ಇಟ್ಟುಕೊಳ್ಳಿ
 • ಮರು ದಿನ ಸಾಬೂದನಿಗೆ ಜೀರಿಗೆ ಉಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ
 • ಮಜ್ಜಿಗೆಯಿಂದ ಮೆಣಸಿನ ಕಾಯಿ ತೆಗೆದು ರುಬ್ಬಿದ ಸಾಬುದಾನಿ ಅದರಲ್ಲಿ ತುಂಬಿ
 • ಈ ಮೆಣಸಿನಕಾಯಿಯನ್ನು ಬಿಸಿಲಿನಲ್ಲಿ 3 ದಿನಗಳ ಕಾಲ ಚೆನ್ನಾಗಿ ಒಣಗಿಸಿಕೊಳ್ಳಿ
 • ನಂತರ ಕಾದ ಎಣ್ಣೆಯಲ್ಲಿ ಕರಿದರೆ ಬಾಳಕ ಮೆಣಸಿನಕಾಯಿ ಸವಿಯಲು ಸಿದ್ದ

ಸಿಹಿ ಅಡುಗೆ ಜೊತೆ, ಊಟದ ಜೊತೆ ಬಾಳಕ ಮೆಣಸಿನಕಾಯಿ ಸವಿಯಲು ಚೆನ್ನಾಗಿರುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

1 Response

 1. ಮಾರಿಸನ್ ಮನೋಹರ್ says:

  ಮೊಸರನ್ನದ ಜೊತೆ ಬಾಳಕ ತುಂಬ ಇಶ್ಟ!

ಅನಿಸಿಕೆ ಬರೆಯಿರಿ: