ಜಗದ ಜ್ಯೋತಿ ಬುದ್ದ

– ವೆಂಕಟೇಶ ಚಾಗಿ.

buddha, ಬುದ್ದ

ಬುದ್ದನೆಂದರೆ ಬರೀ ಪದವಲ್ಲ
ಬರೀ ಹೆಸರಲ್ಲ ಒಂದು ಬದುಕಲ್ಲ
ಬುದ್ದನೆಂದರೆ ಜಗದಾ ಜ್ಯೋತಿ ಕಣೋ
ಸತ್ಯದ ಬೆಳಕು ಕಣೋ ತ್ಯಾಗದ ರೂಪ ಕಣೋ

ಆಸೆಯ ಶೂಲಕೆ ಬಲಿಯಾದವರು
ದುಕ್ಕದ ಮಡುವಲಿ ಮಿಂದೆದ್ದವರು
ಅರಿಶಡ್ವರ‍್ಗದ ದಾಸರೋ ನಾವು
ಪ್ರೀತಿಯ ಮಾರುವ ಕಟುಕರೋ ನಾವು
ಏಳಿರೋ ಕೇಳಿರೋ ಬದುಕನು ಅರಿಯಿರೋ
ಆಗಲಿ ಇಂದೇ ಬುದ್ದ ಬಾರತ ಶುದ್ದ ಬಾರತ

ಲುಂಬಿನಿ ವನದಾ ಲೋಕದ ನಿದಿಯು
ಸಿದ್ದಾರ‍್ತ ಹೆಸರಿನ ಶಾಂತಿಯ ಗಣಿಯು
ವೈಶಾಕ ಪೌರ‍್ಣಿಮೆಯ ಶುದ್ದ ಗಳಿಗೆಯಲಿ
ಶುದ್ದೋದನ ಮಾಯಾದೇವಿಯ ಮಗನೆಂದಾಗಿ
ಲೋಕದ ಬದುಕ ಬೋಗದ ಜಾಡನು ತೊರೆದು
ಉದಯವಾಯಿತು ಬುದ್ದ ಬಾರತ ಶುದ್ದ ಬಾರತ

ಕೋಪ ಲೋಬ ಮೌಡ್ಯವ ತೊರೆದು
ಬುದ್ದನೆಂಬುದಕೆ ಸಿರಿಯನು ತೊರೆದು
ಸತ್ಯ ಶೋದನೆಯಲಿ ಗ್ನಾನದ ಸಿದ್ದಿಗೆ
ಬೋದಿ ವ್ರುಕ್ಶದಡಿ ತಪವಿನ ಪಲಕೆ
ಆದ್ಯಾತ್ಮ ತತ್ವದ ಸಾಕ್ಶಾತ್ಕಾರದಿ
ಬುದ್ದ ಗ್ನಾನಿಯಾದನು ಪಾವನ ಬುದ್ದ ಬಾರತ

ಆಸೆಯೇ ದುಕ್ಕಕೆ ಮೂಲವು ಎನ್ನುತಲಿ
ಅಶ್ಟಾಂಗ ಮಾರ‍್ಗದಿ ಜಗಕೆ ಬೋದಿಸಿ
ಬೌದ್ದ ದರ‍್ಮದಿ ಬದುಕನು ಬೆಳಗಿಸಿ
ತ್ಯಾಗ ಜೀವನದ ಸೂತ್ರವ ಅರುಹಿ
ಜಗವ ಬೆಳಗಿದನೋ ಬುದ್ದ ದೇವನು
ಬರತ ಬೂಮಿಯ ಜ್ಯೋತಿ ಬುದ್ದ ಬಾರತವು

(ಚಿತ್ರ ಸೆಲೆ: pexels.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: