ಕವಿತೆ: ಮನ ಕಶ್ಟಗಳನು ಎದುರಿಸಿ ನಿಲ್ಲುವುದು

ಸಿಂದು ಬಾರ‍್ಗವ್.

ಪ್ರಯತ್ನ, Attempt

ಅಂದುಕೊಂಡಂತೆ ಎಂದೂ ನಡೆಯದು
ಹಿಡಿದ ಹಟವ ಮನವು ಬಿಡದು
ಸುಕದ ಸುಪ್ಪತ್ತಿಗೆ ಬೇಕು ಎನದು; ಮನ
ಕಶ್ಟಗಳನು ಎದುರಿಸಿ ನಿಲ್ಲುವುದು

ನಾಳಿನ ಹಾದಿಯ ಜಾಡನು ಹಿಡಿದು
ಇಂದೇ ಒಂದಶ್ಟು ಸಾಗಬೇಕು
ಗಮ್ಯದ ಕಡೆಗೆ ಸಾಗಿದಂತೆಲ್ಲ
ಆತ್ಮದ ಅವಲೋಕನವಾಗಬೇಕು

ಏರಿದ ಏಣಿಯ, ಹಿಡಿದ ಕೈಗಳ
ಮರೆಯಲೇ ಬಾರದು ಗೆಳೆಯ
ನಾಳಿನ ನಮ್ಮಯ ದಿನಗಳ ಎಣಿಸುತ
ಈ ದಿನವ ಹಾಳುಗೆಡವದಿರು ಗೆಳೆಯ

ಕಟಿಣತೆಗೆ ಪಲವು ಆರಾಮಕ್ಕಲ್ಲ
ಮುಳ್ಳಿನ ಜೊತೆಗೆ ಸುಮವು ಇದೆಯಲ್ಲ
ಮೋಡವು ಕರಗಿದರೆ ಮಳೆ ಬರುವುದು
ಬತ್ತಿದ ತೊರೆಯಲಿ ನೀರು ಹರಿವುದು

ಕಾಯಲೇಬೇಕು ಜೊತೆಗೆ ಪ್ರಯತ್ನಗಳೂ ಬೇಕು
ಕಾಯಲೇಬೇಕು ಜೊತೆಗೆ ನಂಬಿಕೆಯೂ ಬೇಕು
ದೇವಬಲವು ತನ್ನ ಚಲವು ಎರಡರ ಮಿಶ್ರಣವು
ಸಾದನೆಯ ಮುಕುಟಕೆ ಕಳಶಪ್ರಾಯವು
ಅದುವೇ ಕಳಶಪ್ರಾಯವು!!

( ಚಿತ್ರ ಸೆಲೆ : adventurenation.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Tulasi Naveen says:

    ಧನ್ಯವಾದಗಳು?

Tulasi Naveen ಗೆ ಅನಿಸಿಕೆ ನೀಡಿ Cancel reply

Enable Notifications OK No thanks