ಮಾವಿನ ಹಣ್ಣಿನ ಶ್ರೀಕಂಡ

–  ಸವಿತಾ.

mango shreekhand, ಮಾವಿನ ಹಣ್ಣಿನ ಶ್ರೀಕಂಡ, ಆಮ್ರಕಂಡ

ಮಾವಿನ ಹಣ್ಣಿನ ಶ್ರೀಕಂಡ ಅನ್ನು ಮಹಾರಾಶ್ಟ್ರ ಹಾಗೂ ಗುಜರಾತ್ ನಲ್ಲಿ ಪೂರಿ ಜೊತೆ ಮತ್ತು ಹಾಗೆಯೂ ತಿನ್ನುತ್ತಾರೆ. ಬೆಳಗಾವಿಯಲ್ಲೂ ಇದು ತುಂಬಾ ಹೆಸರುವಾಸಿ. ಇದಕ್ಕೆ ಆಮ್ರಕಂಡ ಎಂದೂ ಕರೆಯುತ್ತಾರೆ.

ಬೇಕಾಗುವ ಪದಾರ‍್ತಗಳು

ಗಟ್ಟಿ ಮೊಸರು – 3 ಬಟ್ಟಲು
ಮಾವಿನ ಹಣ್ಣು – 2
ಏಲಕ್ಕಿ – 1
ಸಕ್ಕರೆ – 1/2 ಬಟ್ಟಲು
ಕೇಸರಿ – 2 ದಳ
ಹಾಲು – 1 ಟೀಸ್ಪೂನ್
ಬಾದಾಮಿ ಪಿಸ್ತಾ ಚೂರುಗಳು – ಸ್ವಲ್ಪ

ಮಾಡುವ ವಿದಾನ

ಮೊಸರನ್ನು ಒಂದು ತೆಳು ಬಟ್ಟೆಯಲ್ಲಿ ಕಟ್ಟಿ ನೀರಿನ ಅಂಶ ತೆಗೆದು ಗಟ್ಟಿ ಮಾಡಿ ಇಟ್ಟುಕೊಳ್ಳಿ. ಮಾವಿನ ಹಣ್ಣು ಕತ್ತರಿಸಿ ಅರ‍್ದ ಹೋಳುಗಳನ್ನು ಹಾಗೇ ಇಟ್ಟಿರಿ. ಉಳಿದ ಅರ‍್ದ ಹೋಳುಗಳಿಗೆ ಸಕ್ಕರೆ, ಕೇಸರಿ ದಳ ಮತ್ತು ಏಲಕ್ಕಿ ಬೀಜ ಹಾಕಿ ಮಿಕ್ಸರ್ ನಲ್ಲಿ ರುಬ್ಬಿ. ರುಬ್ಬಿದ ಮಾವಿನ ಹಣ್ಣಿನ ರಸ ಮತ್ತು ಗಟ್ಟಿ ಮೊಸರನ್ನು ಸೇರಿಸಿ, ಮೇಲೆ ಮಾವಿನ ಹಣ್ಣಿನ ಹೋಳುಗಳನ್ನು ಹಾಕಿ. ಈಗ ಮಾವಿನ ಹಣ್ಣಿನ ಶ್ರೀಕಂಡ ಸವಿಯಲು ತಯಾರು. ಬೇಕಾದರೆ ಬಾದಾಮಿ ಪಿಸ್ತಾ ಚೂರುಗಳನ್ನು ಮೇಲೆ ಹಾಕಿಕೊಳ್ಳಬಹುದು.

(ಚಿತ್ರ ಸೆಲೆ: ಸವಿತಾ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: