ಬಿರಂಜಿ ಅನ್ನ

ಸವಿತಾ.

ಬಿರಂಜಿ ಅನ್ನ, Biranji Rice

ಏನೇನು ಬೇಕು?

  • 1 ಲೋಟ ಅಕ್ಕಿ
  • 1 ಚಮಚ ಜೀರಿಗೆ
  • 1 ಲೋಟ ತೆಂಗಿನಕಾಯಿ ತುರಿ
  • 2 ಲೋಟ ನೀರು
  • 3 ಈರುಳ್ಳಿ
  • 4 ಹಸಿಮೆಣಸಿನಕಾಯಿ
  • 4 ಲವಂಗ
  • 4 ಏಲಕ್ಕಿ
  • 5 ಚಮಚ ಬೆಣ್ಣೆ ಅತವಾ ತುಪ್ಪ
  • 8 ಬೆಳ್ಳುಳ್ಳಿ ಎಸಳು
  • 10 ಕರಿಬೇವು ಎಲೆ
  • ಸ್ವಲ್ಪ ಕೊತ್ತಂಬರಿ ಸೊಪ್ಪು, ಚಕ್ಕೆ, ಗೋಡಂಬಿ, ದ್ರಾಕ್ಶಿ

ಮಾಡುವ ಬಗೆ

ಅಕ್ಕಿ ತೊಳೆದು ಅರ‍್ದ ಗಂಟೆ ನೆನೆಯಲು ಇಡಿ. ಕತ್ತರಿಸಿದ ಎರಡು ಈರುಳ್ಳಿ ಮತ್ತು ಸುಲಿದ ಬೆಳ್ಳುಳ್ಳಿ ಎಸಳು ಹುರಿದು ಹಸಿ ಕೊಬ್ಬರಿ ತುರಿ ಸೇರಿಸಿ ರುಬ್ಬಿ ಇಟ್ಟುಕೊಳ್ಳಿ. ಬಾಣಲೆಗೆ ಬೆಣ್ಣೆ ಅತವಾ ತುಪ್ಪ ಹಾಕಿ, ಜೀರಿಗೆ ಕರಿಬೇವು ಹಾಕಿ ಬಾಡಿಸಿ. ಒಂದು ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಕತ್ತರಿಸಿ ಹಾಕಿ ಚೆನ್ನಾಗಿ ಹುರಿಯಿರಿ. ರುಬ್ಬಿದ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಹುರಿದು ನಂತರ ಅಕ್ಕಿ ಸೇರಿಸಿ. ಚಕ್ಕೆ, ಲವಂಗ, ಏಲಕ್ಕಿ ಪುಡಿ, ಸ್ವಲ್ಪ ಉಪ್ಪು ಮತ್ತು ಎರಡು ಲೋಟ ನೀರು ಸೇರಿಸಿ ಸಣ್ಣ ಉರಿಯಲ್ಲಿ ಬೇಯಿಸಿ.

ಈಗ ತಯಾರಾದ ಬಿರಂಜಿಗೆ ತುಪ್ಪದಲ್ಲಿ ಹುರಿದ ಗೋಡಂಬಿ, ಒಣ ದ್ರಾಕ್ಶಿ  ಸೇರಿಸಿ ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪು ಮೇಲೆ ಹಾಕಿ ಕೈಯಾಡಿಸಿ. ಈಗ ಬಿರಂಜಿ ಅನ್ನ ಸವಿಯಲು ಸಿದ್ದ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks