ಹಬ್ಬದ ಸಿಹಿ : ಬಾದಾಮ್ ಪುರಿ

– ಸವಿತಾ.

badam puri, sweet, ಬಾದಾಮ್ ಪುರಿ, ಸಿಹಿ ತಿಂಡಿ

ಬೇಕಾಗುವ ಸಾಮಾನುಗಳು

  • ಗೋದಿ ಹಿಟ್ಟು – 1 ಬಟ್ಟಲು
  • ಚಿರೋಟಿ ರವೆ – ಬಟ್ಟಲು
  • ಮೈದಾ ಹಿಟ್ಟು – 1/2 ಬಟ್ಟಲು
  • ತುಪ್ಪ – 3 ಚಮಚ
  • ಸಕ್ಕರೆ – 2 ಬಟ್ಟಲು
  • ಏಲಕ್ಕಿ – 2
  • ಲವಂಗ – 20
  • ಒಣ ಕೊಬ್ಬರಿ ತುರಿ – 1 ಬಟ್ಟಲು

ಮಾಡುವ ಬಗೆ

ಗೋದಿ ಹಿಟ್ಟು,ಚಿರೋಟಿ ರವೆ ಮತ್ತು ಮೈದಾ ಹಿಟ್ಟಿಗೆ ತುಪ್ಪ, ಸ್ವಲ್ಪ ನೀರು ಸೇರಿಸಿ, ಚೆನ್ನಾಗಿ ನಾದಿ. ಪುರಿ ಹಿಟ್ಟಿನ ಹದಕ್ಕೆ ನಾದಿದ ಮೇಲೆ ಒಂದು ಗಂಟೆ ಕಾಲ ನೆನೆಯಲು ಬಿಡಿ. ಸಕ್ಕರೆ ತೋಯುವಶ್ಟು ನೀರು ಸೇರಿಸಿ ಎರಡೆಳೆ ಪಾಕ ಮಾಡಿ. ಏಲಕ್ಕಿ ಪುಡಿ ಮಾಡಿ ಸೇರಿಸಿ ಕೈಯಾಡಿಸಿ ಇಟ್ಟುಕೊಳ್ಳಿ.

ಕಲಸಿದ ಹಿಟ್ಟು ಸ್ವಲ್ಪ ಹಿಡಿದು ಪುರಿ ಲಟ್ಟಿಸಿ. ಸ್ವಲ್ಪ ಅಕ್ಕಿ ಹಿಟ್ಟು ಅತವಾ ಮೈದಾ ಹಿಟ್ಟು ಹಾಕಿ ಪುರಿ ಲಟ್ಟಿಸಿ ನಡುವೆ ಮಡಚಿ. ನಂತರ ಎರಡು ಕೊನೆ ಮದ್ಯ ಸೇರಿಸಿ ಒಂದು ಲವಂಗ ಸಿಕ್ಕಿಸಿ, ತ್ರಿಕೋನ ಆಕಾರ ಕೊಟ್ಟು ಕಾದ ಎಣ್ಣೆಯಲ್ಲಿ ಕರಿಯಿರಿ. ಸ್ವಲ್ಪ ಆರಿದ ಬಳಿಕ ಸಕ್ಕರೆ ಪಾಕದಲ್ಲಿ ಅದ್ದಿ ತೆಗೆದು, ಒಣ ಕೊಬ್ಬರಿ ತುರಿಯಲ್ಲಿ ಹೊರಳಾಡಿಸಿ ಅತವಾ ಮೇಲೆ ಒಣ ಕೊಬ್ಬರಿ ತುರಿ ಉದುರಿಸಿ ಸ್ವಲ್ಪ ಆರಲು ಬಿಡಿ. ಈಗ ಬಾದಾಮ್ ಪುರಿ ಸವಿಯಲು ಸಿದ್ದ.

ಒಂದು ಡಬ್ಬಿಯಲ್ಲಿ ಇಟ್ಟು ಒಂದು ವಾರ ತಿನ್ನಬಹುದು. ಬಾದಾಮ್ ಪುರಿಯನ್ನು ಹೆಚ್ಚಾಗಿ ದೀಪಾವಳಿ ಹಬ್ಬಕ್ಕೆ  ಮಾಡಲಾಗುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications