ರೊಟ್ಟಿ ಮುಟಿಗಿ

– ಸವಿತಾ.

ರೊಟ್ಟಿ ಮುಟಿಗಿ, rotti

ಬೇಕಾಗುವ ಸಾಮಾನುಗಳು

  • ಜೋಳದ ರೊಟ್ಟಿ – 3
  • ತುಪ್ಪ – 3 ಚಮಚ
  • ಬೆಳ್ಳುಳ್ಳಿ – 6 ಎಸಳು
  • ಜೀರಿಗೆ – 1/4 ಚಮಚ
  • ಒಣ ಕಾರದ ಪುಡಿ – 2 ಚಮಚ
  • ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ

ಬಿಸಿ ಜೋಳದ ರೊಟ್ಟಿಯನ್ನು ಸಣ್ಣ ಸಣ್ಣ ಚೂರು ಮಾಡಿಕೊಳ್ಳಿ. ಒರಳು ಕಲ್ಲಿನಲ್ಲಿ ಉಪ್ಪು, ಒಣ ಕಾರದ ಪುಡಿ, ಬೆಳ್ಳುಳ್ಳಿ ಎಸಳು , ಜೀರಿಗೆ ಸೇರಿಸಿ ಕುಟ್ಟಿಕೊಳ್ಳಿ. ಮೇಲೆ ಸ್ವಲ್ಪ ತುಪ್ಪ ಸೇರಿಸಿ ಕುಟ್ಟಿ ಕೈಯಿಂದ ಉಂಡೆ ಕಟ್ಟಿ ಇಟ್ಟುಕೊಂಡರೆ ಜೋಳದ ಮುಟಿಗಿ ತಯಾರು.

ಇದನ್ನು ಹೆಚ್ಚಾಗಿ ಬಾಣಂತಿಯರಿಗೆ ಮತ್ತು ಮಕ್ಕಳಿಗೆ ಕೊಡುತ್ತಾರೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks