ಕವಿತೆ: ಕಾಡನ್ನು ಉಳಿಸಿ

– ವೆಂಕಟೇಶ ಚಾಗಿ.

save forest, ಕಾಡು ಉಳಿಸಿ

ಕಾಡನು ಕಡಿಯುವ ನಾಡಿನ ಜನರೆ
ಕಾಡಿನ ಮಹಿಮೆಯ ಮೊದಲು ತಿಳಿಯಿರಿ
ನಾಡಿನ ಉಳಿವಿಗೆ ಕಾಡು ಇರಲೇಬೇಕು
ಎಂಬುದ ಬದುಕಲಿ ಮರೆಯದಿರಿ

ಬೂಮಿಯ ಮೇಲಿನ ಜೀವಿಗಳಿಗೆಲ್ಲ
ಉಸಿರನು ನೀಡುವ ದೇವರೇ ಕಾಡುಗಳು
ಕಲ್ಮಶವಾದ ಗಾಳಿಯ ಸೇವನೆ ಮಾಡಲು
ಮಾನವ ಬದುಕಲಿ ಸಾವೇ ನೋವುಗಳು

ಕಾಲಕಾಲಕೆ ಮಳೆಯು ಬರಲು
ಕಾರಣವಾಗಿವೆ ಹಸಿರಿನ ಕಾಡುಗಳು
ಉತ್ತಮ ಮಳೆಯು ಬರಲು ಇಳೆಗೆ
ಬೆಳೆಯು ಬೆಳೆದು ಸಂತಸ ತರುವುದು

ಮಾನವನಂತೆ ಕೋಟಿ ಜೀವಿಗಳು
ಕಾಡನೆ ನಂಬಿ ಬದುಕುತಿಹವು
ಕಾಡನು ಕಡಿದರೆ ಜೀವನ ಕುರುಡು
ಎನ್ನುವ ಸತ್ಯವ ಮರೆತು ಬದುಕದಿರಿ

ಮನೆಯ ಶಾಲೆಯ ಊರಿನ ಸುತ್ತ
ತಪ್ಪದೆ ಮರಗಳ ಬೆಳೆಸಿ ಪೋಶಿಸಿರಿ
ಅಪ್ಪಿಕೊ ಚಳುವಳಿ ಎಲ್ಲೆಡೆ ಹರಡಿಸಿ
ನಿಸರ‍್ಗ ಸೌಂದರ‍್ಯ ಹೆಚ್ಚಿಸಿರಿ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: