ಕವಿತೆ : ನಮ್ಮವರು
ನಮ್ಮವರು ನಮಗೆ ಹೀಗೆ
ಒಳಗೊಳಗೆ ಹಿತಶತ್ರುಗಳು
ಬೆನ್ನು ತಟ್ಟಿ ಮುಂದೆ ಬಿಟ್ಟು
ಮೋಜು ನೋಡುವ ಕ್ರಿಮಿಗಳು
ಅವಕಾಶಕ್ಕಾಗಿ ಕಾದು ಕುಳಿತ
ಬೇಳೆ ಬೇಯಿಸಿಕೊಳ್ಳುವ ಮನದವರು
ಸಿಹಿ ಹಾಲಲ್ಲಿ ಹುಳಿ ಹಿಂಡುವ
ತೆರೆಮರೆಗಿನ ಕೊಳಕು ಬಾವದವರು
ಗಾಯಕ್ಕೆ ಮುಲಾಮು ಹಚ್ಚುವರು
ಔಶದಿಯಲ್ಲಿ ಕಾರ ಬೆರೆಸಿ
ಮೇಲೊಂದಿಶ್ಟು ಗಾಳಿ ಹಾಕಿ
ಕೇಕೆ ಹಾಕುವರು ಪ್ರೀತಿ ಹರಿಸಿ
ಹೊಟ್ಟೆಕಿಚ್ಚಿನ ಹುಚ್ಚು ಹೆಚ್ಚಾಗಿದೆ
ಮಾಗುವ ಗಾಯಕ್ಕೆ ಸೂಜಿ ನೆಡುತಿದೆ
ಮೊಸಳೆ ಕಣ್ಣೀರು ಹರಿದಿದೆ
ತುಸು ನಿಂತು ಯೋಚಿಸಬೇಕಿದೆ
ಎರಡು ಮುಕದವರು ನಮ್ಮವರು
ನಮಗಾಗಿ ತಮ್ಮೊಲವ ಮರೆತವರು
ಶುಬವಾಗಲಿ ದೇವ ದಯೆ ತೋರಲಿ
ನೆಮ್ಮದಿಯಿಂದಿರಲಿ ನಮ್ಮವರು
( ಚಿತ್ರಸೆಲೆ : wikihow.com )
ಬಂಧು ಬಾಂಧರ್ವರಿಂದ ನೊಂದು ಬರೆದಂತಿದೆ. ಇಂತಹ ಸನ್ನಿವೇಶಗಳು ಯಾರನ್ನೂ ಬಿಟ್ಟಿಲ್ಲ. ಎಷ್ಟೋ ಸಂದರ್ಭಗಳಲ್ಲಿ ನಮ್ಮ ಅಂಗಗಳೇ ನಮಗೆ ಸಹಕರಿಸುವುದಿಲ್ಲ. ಹೀಗಿರುವಾಗ ನಮ್ಮ ಆಲೋಚನೆಗಳಿಗಿಂತ ಭಿನ್ನವಿರುವ ಬೇರೊಬ್ಬರು ಹೇಗೆ ಜೊತೆಯಾದಾರು? ಜೊತೆಯಾದರೂ ಒಂದು ಸ್ವಾರ್ಥ ಇದ್ದೇ ಇರುತ್ತೆ ಅಲ್ವ. ಸ್ವಾರ್ಥ ಮನುಷ್ಯನ ಗೋಪ್ಯ ಮುಖ. ಇದರಿಂದ ಯಾರೊಬ್ಬರೂ ಹೊರತಾಗಿಲ್ಲ. ಅದಿಲ್ಲದೆ ಪ್ರಪಂಚ ಮುಂದೆ ಸಾಗುವುದಿಲ್ಲ. ಹಾಗಾಗಿ ನಮ್ಮ ಆತ್ಮಾವಲೋಕನ ಮಾಡಿಕೊಂಡು ಮತ್ತೊಬ್ಬರಿಗೆ ತೊಂದರೆ ಆಗದಂತೆ ಬದುಕಲು ಸಾಧ್ಯವಾದಷ್ಟೂ ಪ್ರಯತ್ನಿಸೋಣ. ಅದೇ ಹಿರಿಮೆ ಗರಿಮೆ ಅಲ್ಲವೆ….
ಇಷ್ಟೊಂದು ನಿರಾಶೆ ಅಗತ್ಯವಿಲ್ಲವೆಂದೆನಿಸುತ್ತದೆ.