ಕವಿತೆ : ನಮ್ಮವರು

– ಅಮರೇಶ ಎಂ ಕಂಬಳಿಹಾಳ.

ಬೆನ್ನಿಗೆಚೂರಿ, backstabber

ನಮ್ಮವರು ನಮಗೆ ಹೀಗೆ
ಒಳಗೊಳಗೆ ಹಿತಶತ್ರುಗಳು
ಬೆನ್ನು ತಟ್ಟಿ ಮುಂದೆ ಬಿಟ್ಟು
ಮೋಜು ನೋಡುವ ಕ್ರಿಮಿಗಳು

ಅವಕಾಶಕ್ಕಾಗಿ ಕಾದು ಕುಳಿತ
ಬೇಳೆ ಬೇಯಿಸಿಕೊಳ್ಳುವ ಮನದವರು
ಸಿಹಿ ಹಾಲಲ್ಲಿ ಹುಳಿ ಹಿಂಡುವ
ತೆರೆಮರೆಗಿನ ಕೊಳಕು ಬಾವದವರು

ಗಾಯಕ್ಕೆ ಮುಲಾಮು ಹಚ್ಚುವರು
ಔಶದಿಯಲ್ಲಿ ಕಾರ ಬೆರೆಸಿ
ಮೇಲೊಂದಿಶ್ಟು ಗಾಳಿ ಹಾಕಿ
ಕೇಕೆ ಹಾಕುವರು ಪ್ರೀತಿ ಹರಿಸಿ

ಹೊಟ್ಟೆಕಿಚ್ಚಿನ ಹುಚ್ಚು ಹೆಚ್ಚಾಗಿದೆ
ಮಾಗುವ ಗಾಯಕ್ಕೆ ಸೂಜಿ ನೆಡುತಿದೆ
ಮೊಸಳೆ ಕಣ್ಣೀರು ಹರಿದಿದೆ
ತುಸು ನಿಂತು ಯೋಚಿಸಬೇಕಿದೆ

ಎರಡು ಮುಕದವರು ನಮ್ಮವರು
ನಮಗಾಗಿ ತಮ್ಮೊಲವ ಮರೆತವರು
ಶುಬವಾಗಲಿ ದೇವ ದಯೆ ತೋರಲಿ
ನೆಮ್ಮದಿಯಿಂದಿರಲಿ ನಮ್ಮವರು

( ಚಿತ್ರಸೆಲೆ : wikihow.com )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. ಬಂಧು ಬಾಂಧರ್ವರಿಂದ ನೊಂದು ಬರೆದಂತಿದೆ. ಇಂತಹ ಸನ್ನಿವೇಶಗಳು ಯಾರನ್ನೂ ಬಿಟ್ಟಿಲ್ಲ. ಎ‌ಷ್ಟೋ ಸಂದರ್ಭಗಳಲ್ಲಿ ನಮ್ಮ ಅಂಗಗಳೇ ನಮಗೆ ಸಹಕರಿಸುವುದಿಲ್ಲ. ಹೀಗಿರುವಾಗ ನಮ್ಮ ಆಲೋಚನೆಗಳಿಗಿಂತ ಭಿನ್ನವಿರುವ ಬೇರೊಬ್ಬರು ಹೇಗೆ ಜೊತೆಯಾದಾರು? ಜೊತೆಯಾದರೂ ಒಂದು ಸ್ವಾರ್ಥ ಇದ್ದೇ ಇರುತ್ತೆ ಅಲ್ವ. ಸ್ವಾರ್ಥ ಮನು‌ಷ್ಯನ ಗೋಪ್ಯ ಮುಖ. ಇದರಿಂದ ಯಾರೊಬ್ಬರೂ ಹೊರತಾಗಿಲ್ಲ. ಅದಿಲ್ಲದೆ ಪ್ರಪಂಚ ಮುಂದೆ ಸಾಗುವುದಿಲ್ಲ. ಹಾಗಾಗಿ ನಮ್ಮ ಆತ್ಮಾವಲೋಕನ ಮಾಡಿಕೊಂಡು ಮತ್ತೊಬ್ಬರಿಗೆ ತೊಂದರೆ ಆಗದಂತೆ ಬದುಕಲು ಸಾಧ್ಯವಾದಷ್ಟೂ ಪ್ರಯತ್ನಿಸೋಣ. ಅದೇ ಹಿರಿಮೆ ಗರಿಮೆ ಅಲ್ಲವೆ….

  2. Maheedasa says:

    ಇಷ್ಟೊಂದು ನಿರಾಶೆ ಅಗತ್ಯವಿಲ್ಲವೆಂದೆನಿಸುತ್ತದೆ.

Vasuki Shanmukhapriya ಗೆ ಅನಿಸಿಕೆ ನೀಡಿ. Cancel reply

Your email address will not be published. Required fields are marked *