ಬೆಂಡೆಕಾಯಿ ಸಾರು
– ಕಲ್ಪನಾ ಹೆಗಡೆ.
ಏನೇನು ಬೇಕು?
- ಬೆಂಡೆಕಾಯಿ – 10
- ನೀರು – 10 ಲೋಟ
- ಎಣ್ಣೆ – 1 ಚಮಚ
- ನಿಂಬೆಹಣ್ಣಿನ ರಸ – 2 ಚಮಚ
- ಕಾಳು ಮೆಣಸು – 5 ಕಾಳು
- ಸಾಸಿವೆ – 1/2 ಚಮಚ
- ಜೀರಿಗೆ – 1/2 ಚಮಚ
- ಹಸಿಮೆಣಸಿನ ಕಾಯಿ – 1
- ಅರಿಶಿಣ ಪುಡಿ – 1/4 ಚಮಚ
- ಉಪ್ಪು – ರುಚಿಗೆ ತಕ್ಕಶ್ಟು
ಮಾಡೋದು ಹೇಗೆ?
ಮೊದಲು ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಕುದಿಸಿಕೊಳ್ಳಿ. ಅದಕ್ಕೆ ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ರೌಂಡ್ ಆಕಾರದಲ್ಲಿ ತೆಳ್ಳಗೆ ಹೆಚ್ಚಿ ಹಾಕಿ. ಎಣ್ಣೆ 1 ಚಮಚ, ನಿಂಬೆಹಣ್ಣಿನ ರಸ, ರುಚಿಗೆ ತಕ್ಕಶ್ಟು ಉಪ್ಪು ಹಾಕಿಕೊಳ್ಳಿ. ಸಾಸಿವೆ, ಕಾಳು ಮೆಣಸು, ಮೆಣಸಿನಕಾಯಿ, ಜೀರಿಗೆ ಹಾಕಿ ಮಿಕ್ಸಿಯಲ್ಲಿ ರುಬ್ಬಿಟ್ಟುಕೊಳ್ಳಿ.
ಬೆಂಡೆಕಾಯಿ ಚೆನ್ನಾಗಿ ಬೆಂದಮೇಲೆ ಅದಕ್ಕೆ ರುಬ್ಬಿದ ಕಲಕವನ್ನು ಹಾಕಿ ಸೌಟಿನಿಂದ ಚೆನ್ನಾಗಿ ಕಲಸಿ, ಸ್ವಲ್ಪ ಹೊತ್ತು ಕುದಿಯಲು ಬಿಡಿ. ಆಬಳಿಕ ಅದನ್ನು ಇಳಿಸಿ 1 ಚಮಚ ನಿಂಬೆಹಣ್ಣಿನ ರಸ ಹಾಕಿ. ಅದಕ್ಕೆ ಕಾಲು ಚಮಚ ಎಣ್ಣೆ, ಸಾಸಿವೆ, ಇಂಗು ಹಾಕಿ ಒಗ್ಗರಣೆ ಮಾಡಿಕೊಳ್ಳಿ.
ತಯಾರಿಸಿದ ಬೆಂಡೆಕಾಯಿ ಸಾರನ್ನು ಕುಡಿಯಲು ನೀಡಿ.
(ಚಿತ್ರ ಸೆಲೆ: ಕಲ್ಪನಾ ಹೆಗಡೆ)
ಇತ್ತೀಚಿನ ಅನಿಸಿಕೆಗಳು