ಕವಿತೆ: ಚೆಲುವ ನಾಡು ಕರುನಾಡು

– ವಿನು ರವಿ.

ಚೆಲುವ ನಾಡು ಕರುನಾಡು
ಹೊನ್ನಬೀಡು ಕನ್ನಡ ನಾಡು
ಕವಿಕೋಗಿಲೆಗಳ ಹಾಡು
ಕೇಳುತ ಕಂದ ನೀನಾಡು

ಕನ್ನಡವೆಂದರೆ ಸಿರಿ ಸಂಬ್ರಮವು
ಕನ್ನಡವೆಂದರೆ ದೇವರಗುಡಿಯು
ಕನ್ನಡ ಕಲಿತ ಓ ಜಾಣ
ನಿನ್ನಯ ಮನಸೇ ಕಾಜಾಣ

ನಿಂತ ನೆಲವೇ ಉಸಿರಾಗಲಿ
ಕನ್ನಡ ಕೀರುತಿ ಗಗನಕ್ಕೇರಲಿ
ಮಾತು ಮಂತನ ಕನ್ನಡದಲ್ಲೇ ಇರಲಿ
ಜಗದ ಚಿಂತನ ಕನ್ನಡಕ್ಕೊದಗಲಿ

ಕಲಿಸು ಅಬಿಮಾನವ ಕನ್ನಡತನವ
ಉಣಿಸು ಸಾಹಿತ್ಯ ಸವಿ ಬೋಜನವ
ಹೊರಡಲಿ ಕನ್ನಡ ತೇರು ನಿರಂತರ
ಏರಲಿ ಕನ್ನಡ ಬಾವುಟ ಸರ‍್ವ ಸುಂದರ

(ಚಿತ್ರ ಸೆಲೆ: OneIndia Kannada)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *