ಮಜ್ಜಿಗೆ ಕಿಚಡಿ
– ಸವಿತಾ.
ಬೇಕಾಗುವ ಸಾಮಾನುಗಳು
- ಮಜ್ಜಿಗೆ – 3 ಬಟ್ಟಲು
- ಅಕ್ಕಿ – 1 ಬಟ್ಟಲು
- ತುಪ್ಪ -4 ಚಮಚ
- ಸಾಸಿವೆ – 1/2 ಚಮಚ
- ಜೀರಿಗೆ – 1/2 ಚಮಚ
- ಉದ್ದಿನಬೇಳೆ -1/2 ಚಮಚ
- ಒಣ ಮೆಣಸಿನ ಕಾಯಿ – 3
- ಕರಿಬೇವು -5-6 ಎಲೆ
- ಗೋಡಂಬಿ – 5-6
- ಒಣ ದ್ರಾಕ್ಶಿ – 1 ಚಮಚ
- ಅರಿಶಿಣ ಪುಡಿ – ಸ್ವಲ್ಪ
- ಉಪ್ಪು – ರುಚಿಗೆ ತಕ್ಕಶ್ಟು
ಮಾಡುವ ಬಗೆ
ಮೊದಲು ಅಕ್ಕಿ ತೊಳೆದು ಇಟ್ಟುಕೊಳ್ಳಿ. ನಾಲ್ಕು ಚಮಚ ತುಪ್ಪ ಬಿಸಿ ಮಾಡಿ. ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕರಿಬೇವು ಮತ್ತು ಒಣ ಮೆಣಸಿನ ಕಾಯಿ ತುಂಡು ಮಾಡಿ ಹಾಕಿ ಹುರಿಯಿರಿ. ಗೋಡಂಬಿ, ಒಣ ದ್ರಾಕ್ಶಿ ಹಾಕಿ ಹುರಿದು, ಸ್ವಲ್ಪ ಅರಿಶಿಣ ಪುಡಿ ಮತ್ತು ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ ಇಳಿಸಿ. ಒಗ್ಗರಣೆಗೆ ಮೂರು ಬಟ್ಟಲು ಮಜ್ಜಿಗೆ ಮತ್ತು ತೊಳೆದಿಟ್ಟ ಅಕ್ಕಿಯನ್ನು ಸೇರಿಸಿ, ಕುಕ್ಕರ್ ನಲ್ಲಿ ಮೂರು ಕೂಗು ಬರುವವರೆಗೆ ಕುದಿಸಿರಿ.
ಮಜ್ಜಿಗೆ ಕಿಚಡಿ ಸವಿಯಲು ಸಿದ್ದ. ಸ್ವಲ್ಪ ಆರಿದ ನಂತರ ಮುಚ್ಚಳ ತೆಗೆದು ಹಪ್ಪಳ ಸಂಡಿಗೆ ಜೊತೆ ಸವಿಯಿರಿ.
ಇತ್ತೀಚಿನ ಅನಿಸಿಕೆಗಳು