ಬದುಕಿನಂಗಳದ ಕವಿತೆ

– .

ಬರೆಯಿರಿ ನವಕವಿತೆಯ ಬದುಕಿನಂಗಳದಿ
ಅನಂತ ನೋವಿನಲೂ ಸರಿಯೇ
ಸಿಹಿ ನಗುವಿನಲ್ಲಿಯಾದರು

ಕಿರಿದಾದ ಕಣ್ಣುಗಳಲಿ
ದಿನಕರನ ಕನಸು ಕಾಣಿರಿ
ಸುರಿವ ಕಗ್ಗತ್ತಲಿನಲೊಮ್ಮೆ
ಕಣ್ಣರೆಪ್ಪೆಯ ಮೇಲೆ
ಮೂಡಿತೊಂದು ಕಣ್‍ಬಿಂದು
ಮುತ್ತಿನ ಬೆಲೆ ಅದಕ್ಕಿಹುದು
ಎರೆಯಿರಿ ಆತ್ಮಪ್ರೀತಿಯ ದಾರೆಯನು
ಬರೆಯಿರಿ ಹೊಸಕವಿತೆಯ ಬದುಕಿನಂಗಳದಿ

ಜೀವನ ಪಯಣದಲಿ
ಚೆಲ್ಲಿ ಹೋದ ನೀರ ಬೆಲೆಯ
ಅಳೆದು ತೂಗುವುದು ಅರ‍್ತಹೀನ
ಕೊನೆಗೊಳ್ಳುವುದು ಸಾಗರದಿ
ಅದರೊಂದಿಗೆ ಸಮಾಗಮಿಸಿ
ಅಮ್ರುತವಾಗಿದೆ ಜಲಜೀವನವಿಲ್ಲಿ
ತೇಲಿರಿ ಹೊಸ ಪ್ರೀತಿ ಸೆಲೆಯಲಿ
ಬರೆಯಿರಿ ಹೊಸಕವಿತೆಯ ಬದುಕಿನಂಗಳದಿ

ಬರೆಯಿರಿ ನವಕವಿತೆಯ ಬದುಕಿನಂಗಳದಿ
ಸಹನೆಯ ನೋವಿನಲೂ ಸರಿಯೇ
ಬಾನಂಗಳದಿ ಹಾರಾಡುತವಾದರು…

(ಚಿತ್ರ: www.mrchoytraveller.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: