ಬೆಂಡೆಕಾಯಿ ಕುರುಕುರೆ

– ಸವಿತಾ.

ಬೆಂಡೆಕಾಯಿ, ಕುರುಕಲು, okra, snack

ಬೇಕಾಗುವ ಸಾಮಾನುಗಳು

ತಾಜಾ ಬೆಂಡೆಕಾಯಿ – 15
ಕಡಲೆ ಹಿಟ್ಟು – 2 ಚಮಚ
ಅಕ್ಕಿ ಹಿಟ್ಟು – 2 ಚಮಚ
ಒಣ ಕಾರದ ಪುಡಿ – 1 ಚಮಚ
ಜೀರಿಗೆ ಪುಡಿ – 1/4 ಚಮಚ
ಕೊತ್ತಂಬರಿ ಪುಡಿ – 1/4 ಚಮಚ
ಗರಮ್ ಮಸಾಲೆ ಪುಡಿ – 1/4 ಚಮಚ
ಅರಿಶಿಣ ಪುಡಿ – ಸ್ವಲ್ಪ
ಅಡುಗೆ ಸೋಡಾ – ಸ್ವಲ್ಪ
ಎಣ್ಣೆ – ಕರಿಯಲು
ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ

ಬೆಂಡೆಕಾಯಿ ತೊಳೆದು ಒರೆಸಿ ಇಟ್ಟುಕೊಳ್ಳಿ. ಆರಿದ ಮೇಲೆ ಎರಡು ಬದಿ ಕೊನೆ ಕತ್ತರಿಸಿ ನಂತರ ನಾಲ್ಕು ಬಾಗ ಸೀಳಿ ಇಟ್ಟುಕೊಳ್ಳಿ. 2 ಚಮಚ ಬಿಸಿ ಮಾಡಿದ ಎಣ್ಣೆಗೆ ಅಕ್ಕಿಹಿಟ್ಟು, ಕಡಲೆಹಿಟ್ಟು, ಉಪ್ಪು, ಅರಿಶಿಣ, ಒಣ ಕಾರದ ಪುಡಿ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಗರಮ್ ಮಸಾಲೆ ಪುಡಿ ಮತ್ತು ಸ್ವಲ್ಪ ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಬೆಂಡೆಕಾಯಿ ಹೋಳುಗಳಿಗೆ ಹಾಕಿ ಕಲಸಿಟ್ಟುಕೊಳ್ಳಿ.

ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಸಣ್ಣ ಉರಿ ಇಟ್ಟು ಕಾದ ಎಣ್ಣೆಯಲ್ಲಿ ಕಲಸಿಟ್ಟ ಬೆಂಡೆ ಕಾಯಿ ಒಂದೊಂದೇ ಬಿಡಿ ಬಿಡಿಯಾಗಿ ಹಾಕಿ ಕರಿದು ತೆಗೆಯಿರಿ. ಈಗ ಬೆಂಡೆ ಕಾಯಿ ಕುರುಕುರೆ ಸವಿಯಲು ಸಿದ್ದ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: