ಕವಿತೆ : ಹಸಿವೆಂಬ ಬೂತ

ಶಶಾಂಕ್.ಹೆಚ್.ಎಸ್.

Historical Cooking Historical Pot Historical Fire

ಹಸಿವೆಂಬ ಬೂತದ ಹಿಡಿತಕ್ಕೆ ಸಿಲುಕಿ
ಬದುಕಾಗಿಹುದು ಮೂರಾಬಟ್ಟೆ
ಹೊಟ್ಟೆಯೆಂಬ ಪರ‍ಮಾತ್ಮನ ಸಂತ್ರುಪ್ತಿಗಾಗಿ
ದುಡಿಯುತ್ತಿರ‍ಲು ಮುರಿದು ರ‍ಟ್ಟೆ
ಆದರ‍ೂ ತಪ್ಪದಾಗಿದೆ ಹಸಿವ ಆರ‍್ತನಾದ

ಬಾಳೆಂಬ ರ‍ಣರ‍ಂಗದಲಿ
ಹಸಿವೆಂಬ ಅನಾಮಿಕನೊಡನೆ
ಪ್ರ‍ತಿನಿತ್ಯ ಯುದ್ದಮಾಡುತಲಿ
ಜೀವವಾಗಿಹುದು ಶಕ್ತಿಹೀನ

ದಿನ ನಿತ್ಯ ಕಣ್ಣೀರ‍ು
ತುತ್ತು ಅನ್ನಕ್ಕಾಗಿ
ತೊಟ್ಟು ನೀರಿಗಾಗಿ
ಸಿಕ್ಕರ‍ೆ ಸಂತೋಶಕ್ಕಾಗಿ
ಸಿಗದ್ದಿದಾಗ ಹಸಿವಿನಿಂದಾಗಿ

ಹಸಿವೆಂಬ ಬೂತದಿಂದ
ಬೇಕಾಗಿದೆ ಮುಕ್ತಿ
ಬದುಕೆಂಬ ರ‍ತವ
ಮುನ್ನಡೆಸಲು ಬೇಕಾಗಿದೆ ಶಕ್ತಿ
ಆದರ‍ೂ ನಾ ಅರಿಯಲಾರ‍ೆ
ಆ ದೈವದ ಯುಕ್ತಿ

ಹಸಿದ ಹೊಟ್ಟೆ ಹಸಿದಿರ‍ಲು
ಲೋಕವಾಗಿಹುದು ಕಗ್ಗತ್ತಲು

( ಚಿತ್ರ ಸೆಲೆ : needpix.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Sanjeev Hs says:

    ನೈಜತೆ ತುಂಬಿದ ಬರಹ

Sanjeev Hs ಗೆ ಅನಿಸಿಕೆ ನೀಡಿ. Cancel reply

Your email address will not be published. Required fields are marked *