ಕವಿತೆ : ಅಪ್ಪಟ ದೇಸಿಗ

–  ಚಂದ್ರಗೌಡ ಕುಲಕರ‍್ಣಿ.

kannada, karnataka, ಕನ್ನಡ, ಕರ‍್ನಾಟಕ

ಅಚ್ಚಗನ್ನಡ ದೇಸಿ ನುಡಿಯಲಿ
ಮೂಡಿಬಂದಿದೆ ಈ ಕಬ್ಬ
ಅಪ್ಪಟ ದೇಸಿಗ ಆಂಡಯ್ಯನಿಗೆ
ಹೋಲಿಕೆಯಾಗನು ಮತ್ತೊಬ್ಬ

ಕನ್ನಡ ರತ್ನದ ಕನ್ನಡಿಯಲ್ಲಿ
ನೋಡಿದರೇನು ಕುಂದುಂಟು
ಏತಕೆ ಬೇಕು ತಾಯ್ನುಡಿ ಕಬ್ಬಕೆ
ಸಕ್ಕದ ನುಡಿಯ ಹುಸಿನಂಟು

ಹಲವು ನಾಲಗೆ ಉಳ್ಳ ಶೇಶನು
ಬಣ್ಣಿಸಲಾರನು ಕರುನಾಡು
ನಾಲಗೆ ಒಂದಿದೆ ವರ‍್ಣಿಸಲೆಂತು
ಪ್ರಕ್ರುತಿ ರಮ್ಯ ಸಿರಿಬೀಡು

ಪೂವಿನ ಪೊಳಲಿನ ನನೆಯೆಂಬರಸನು
ಯುದ್ದಕೆ ನಡೆದ ಪಣಕಟ್ಟಿ
ಚಂದ್ರನ ಜಟೆಯಲಿ ದರಿಸಿದ ಶಿವನನೆ
ಸೋಲಿಸಿಬಿಟ್ಟ ಜಗಜಟ್ಟಿ

ಸೊಬಗಿನ ಸುಗ್ಗಿಯ ಅದ್ಬುತ ಕಬ್ಬದ
ಶ್ವಾಸದ ಉಸಿರೆ ಕನ್ನಡವು
ಹೊಸಯುಗದಲ್ಲು ಪಸರಿಸಲೆಲ್ಲೆಡೆ
ಕಸುವಿನ ಉಲಿಯು ಕನ್ನಡವು

(ಚಿತ್ರ ಸೆಲೆ: starofmysore.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: