ಬಾಳೆಹಣ್ಣಿನ ಬೋಂಡಾ

ಸವಿತಾ.

ಬಾಳೆಹಣ್ಣಿನ ಬೋಂಡಾ, Banana Bonda

ಬೇಕಾಗುವ ಪದಾರ‍್ತಗಳು

  • 2 ಬಾಳೆಹಣ್ಣು
  • 1 ಲೋಟ ಗೋದಿ ಹಿಟ್ಟು
  • 3 ಚಮಚ ಬೆಲ್ಲ
  • 2 ಚಮಚ ಅಕ್ಕಿ ಹಿಟ್ಟು
  • 1/4 ಚಮಚ ಅಡುಗೆ ಸೋಡಾ
  • 1/4 ಚಮಚ ಉಪ್ಪು
  • 1 ಏಲಕ್ಕಿ
  • ಕರಿಯಲು ಎಣ್ಣೆ

ಮಾಡುವ ಬಗೆ

ಬೆಲ್ಲದ ಪುಡಿ ಮಾಡಿ ಸ್ವಲ್ಪ ನೀರು ಹಾಕಿ ಸ್ವಲ್ಪ ಬಿಸಿ ಮಾಡಿ ಆರಲು ಬಿಡಿ. ಗೋದಿ ಹಿಟ್ಟು ಮತ್ತು ಬಾಳೆಹಣ್ಣು ಕೈಯಿಂದ ಹಿಚುಕಿ ಚೆನ್ನಾಗಿ ಕಲಸಿ. ಅಕ್ಕಿಹಿಟ್ಟು, ಅಡುಗೆ ಸೋಡಾ, ಏಲಕ್ಕಿ ಪುಡಿ, ಸ್ವಲ್ಪ ಉಪ್ಪು, ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಕಲಸಿ ಇಟ್ಟುಕೊಳ್ಳಿ. ಮದ್ಯಮ ಹದಕ್ಕೆ ಹಿಟ್ಟು ಕಲಸಿಕೊಂಡು ಕಾದ ಎಣ್ಣೆಯಲ್ಲಿ ಕರಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: