ಕವಿತೆ : ಅರ‍್ತವಾಗದೆ ಆತ್ಮಸಕಿ…

ಲೋಹಿತಾಶ್ವ.

ನೆನಪು, Memories

ಹೇಳಬೇಕೆ ಎಲ್ಲವನು
ತುಟಿ ತೆರೆದು‌ ಮಾತಿನಲಿ
ಅರ‍್ತವಾಗದೆ ಆತ್ಮಸಕಿ
ನಿನಗೆಲ್ಲವು ಮೌನದಲಿ?

ಬೇಸಿಗೆಯ ಬಿಸಿಲಲ್ಲಿ
ಬೆಂದ ದರೆಗೆ
ಕೇಳದೆಯೆ ತಣಿಸಲು
ವರುಣ‌ ಬರನೆ?

ಮಾತಿಲ್ಲದೆ ತೋಟದಲಿ
ಹೂವ ಮೊಗ್ಗಿಗೆ
ಅರಳೋ ಪ್ರೇಮವನು
ರವಿಯು ತರನೆ?

ಪದಗಳು ಜರೂರಿಯೇನು
ಸಂವಾದಕೆ ಮದ್ಯದಲಿ?
ಪ್ರೀತಿಯಿದ್ದರೆ ಸಾಲದೇನು
ಬಂದನಕೆ ಆತ್ಮದಲಿ?

ಹೇಳಬೇಕೆ ಎಲ್ಲವನು
ತುಟಿತೆರೆದು ಮಾತಿನಲಿ
ಅರ‍್ತವಾಗದೆ ಆತ್ಮಸಕಿ
ನಿನಗೆಲ್ಲವು ಮೌನದಲಿ?

ಶಟ್ಪದಿಯ ಕಾವ್ಯದಲಿ
ಅದ್ದಿ ಎರೆದು
ಅಲಂಕರಿಸಿ ಮೆರೆಸಿದರೆ
ಸಾಕೇ ಸಕಿಯೆ?

ಕೈಹಿಡಿದು ಮಮತೆಯಲಿ
ಕಣ್ಣ ಒಳಗೆ
ಇಣುಕಿ‌ ನೋಡುವುದು
ಪ್ರೇಮ ಪರಿಯೆ

ಪಾತ್ರಗಳು ಅರ‍್ತವಾಗದು
ಒಪ್ಪದಿರೆ ಆಂತರ‍್ಯದಲಿ
ಹೇಳಲಾಗದು ಎಲ್ಲವನು
ಒಂದೆರಡು ಮಾತಿನಲಿ

ಹೇಳಬೇಕೆ ಎಲ್ಲವನು
ತುಟಿತೆರೆದು ಮಾತಿನಲಿ
ಅರ‍್ತವಾಗದೆ ಆತ್ಮಸಕಿ
ನಿನಗೆಲ್ಲವು ಮೌನದಲಿ

( ಚಿತ್ರಸೆಲೆ : cainellsworth.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: