ಪುಟ್ಟ ಕವನಗಳು
– ವೆಂಕಟೇಶ ಚಾಗಿ.
ಚಂದ್ರ
ಚಂದ್ರನೂ
ಕೊರಗುತ್ತಾ
ಕರಗುತ್ತಾನೆ
ತನ್ನ ನಲ್ಲೆಯ
ನೆನಪಿನಲ್ಲಿ
ಆ
ಹದಿನೈದು ದಿನ!
ಒಪ್ಪಂದ
ಈ ಹ್ರುದಯ
ಅವಳೊಂದಿಗೆ
ಒಪ್ಪಂದ ಮಾಡಿಕೊಂಡಿದೆ
ನಕ್ಕಾಗ ನಗುವುದು
ಮಂಕಾದಾಗ
ಮರುಗುವುದು!
ದಾಕಲೆ
ಈಗೀಗ
ಅವಳ ಮನಸ್ಸು
ದಾಕಲೆಗಳನ್ನು
ಕೇಳತೊಡಗಿದೆ
ನಾನೇ
ಅವಳ ಮನಸ್ಸನ್ನು
ಕದ್ದವನೆನ್ನಲು!
ಪ್ರತಿಬಿಂಬ
ಪ್ರೀತಿಯ
ಚಿಗುರಿನ ಮೇಲೆ
ಬಿದ್ದಿರುವ
ಮಳೆ ಹನಿಗಳಲ್ಲಿ
ಅವಳದೇ
ಪ್ರತಿಬಿಂಬ!!
ಮೌನ
ಕನಸುಗಳು
ಕಾಲಿ ಆದಾಗ
ಮನಸಿನೊಳಗೆ
ಅದೇನೋ ಒಂದು
ಸುಂದರ ಮೌನ;
ಹೊಸ ಕನಸಿನ
ಚಿಗುರಿನ ಮೌನ!
ಸೋಲು
ಆಗಾಗ ಸೋಲುಗಳು
ಹಸಿದ ಮನಸಲಿ
ಹಸಿರು ಚಿಗುರಿಸುವ
ಆಂತರಿಕ ಚಿಲುಮೆಯ
ಚಿಹ್ನೆಗಳು;
ಕನಸು ಚಿಗುರಿಸುವ
ಗೆಲುವಿನ ರುಚಿಯ
ತೋರುವ ಏಣಿಗಳು!
( ಚಿತ್ರಸೆಲೆ : professionalstudies.educ.queensu.ca )
ಇತ್ತೀಚಿನ ಅನಿಸಿಕೆಗಳು